ಸಾಂಟಿಗೋ,
ಏ 19, ಚಿಲಿಯಲ್ಲಿ ಕೊರೊನಾ ವೈರಾಣು ಸೋಂಕಿನ 9730 ಪ್ರಕರಣಗಳು
ದೃಢಪಟ್ಟಿದ್ದು 126 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ
ಭಾನುವಾರ ತಿಳಿಸಿದೆ. ಕಳೆದೊಂದು ದಿನದಲ್ಲಿ 478 ಹೊಸ ಪ್ರಕರಣಗಳು ದಾಖಲಾಗಿದ್ದು
10 ಜನರು ಮೃತಪಟ್ಟಿದ್ದಾರೆ ಎಂದೂ ಸಚಿವಾಲಯ ಹೇಳಿದೆ. 360 ರೋಗಿಗಳು ತೀವ್ರ ನಿಗಾ
ಘಟಕದಲ್ಲಿದ್ದು 91 ಜನರ ಸ್ಥಿತಿ ಗಂಭೀರವಾಗಿದೆ. 588 ವೆಂಟಿಲೇಟರ್ ಗಳು ದೇಶದಲ್ಲಿ
ಲಭ್ಯವಿದೆ ಎಂದು ಆರೋಗ್ಯ ಸಚಿವ ಜೈಮೆ ಮನಾಲಿಚ್ ಹೇಳಿದ್ದಾರೆ.ಈ ಮಧ್ಯೆ 4035 ಜನರು
ಗುಣಮುಖರಾಗಿದ್ದು ಒಟ್ಟು ಸೋಂಕಿತರ ಪೈಕಿ ಶೇ 41 ರಷ್ಟು ಜನರು
ಚೇತರಿಸಿಕೊಂಡಿದ್ದಾರೆ.ಸಾರ್ವಜನಿಕ ಸ್ಥಳ ಮತ್ತು ಲಿಫ್ಟ್ ಗಳಲ್ಲಿ ಸೇರಿದಂತೆ
ಹತ್ತಕ್ಕಿಂತ ಹೆಚ್ಚು ಜನರು
ಸೇರುವೆಡೆ ಜನರು ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದೆ. ಸಾರ್ವಜನಿಕ
ಸಾರಿಗೆಗಳಲ್ಲೂ ಮಾಸ್ಕ್ ಅನ್ನು ಈಗಾಗಲೇ ಕಡ್ಡಾಯ ಮಾಡಲಾಗಿದೆ.ಕರ್ಫ್ಯೂ ಜಾರಿ, ಗಡಿ
ಬಂದ್, ಅನಗತ್ಯ ಕಾರ್ಯಗಳ ರದ್ದು ಮೊದಲಾದ ಕ್ರಮಗಳನ್ನು ಸರ್ಕಾರ ಈಗಾಗಲೇ ಕೈಗೊಂಡಿದೆ.ದೇಶದ
ಆರ್ಥಿಕತೆಗೆ ಚೇತರಿಕೆ ನೀಡಲು ಕಟ್ಟುನಿಟ್ಟಿನ ಸ್ವಚ್ಛತಾ ಕ್ರಮ ಹಾಗೂ ತಪಾಸಣೆಯೊಂದಿಗೆ
ಕ್ರಮೇಣ ವ್ಯಾಪಾರ ವಹಿವಾಟು ಆರಂಭಿಸುವುದಾಗಿ ಚಿಲಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ
ಘೋಷಿಸಿದ್ದಾರೆ.