೨೪ ಗಂಟೆಗಳಲ್ಲಿ ದೇಶದಲ್ಲಿ ೧೦ ಸಾವಿರದ ೯೫೬ ಹೊಸ ಕೊರೊನಾ ಸೋಂಕು ಪ್ರಕರಣ ಪತ್ತೆ

ನವದೆಹಲಿ, ಜೂನ್ ೧೨,ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ  ಕೊರೊನಾ ಸೋಂಕಿನಿಂದ ೬ ಸಾವಿರದ ೧೬೬ ಮಂದಿ ಗುಣಮುಖರಾಗಿದ್ದು, ಇದರೊಂದಿಗೆ  ದೇಶದಲ್ಲಿ ಸೋಂಕಿನಿಂದ ಈವರೆಗೆ  ಚೇತರಿಸಿಕೊಂಡಿರುವರ ಸಂಖ್ಯೆ ೧ ಲಕ್ಷದ ೪೭ಸಾವಿರದ ೧೯೫ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ ೪೯.೪೭ರಷ್ಟಿದೆ ಎಂದು  ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.ದೇಶದಲ್ಲಿ  ೧ ಲಕ್ಷದ ೪೧ ಸಾವಿರದ ೮೪೨  ಕೋವಿಡ್  ಸಕ್ರಿಯ ಪ್ರಕರಣಗಳು  ವೈದ್ಯರ ನಿಗಾದಲ್ಲಿವೆ.  ಕಳೆದ ೨೪ ಗಂಟೆಗಳಲ್ಲಿ ೧೦ ಸಾವಿರದ ೯೫೬ ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ೨ ಲಕ್ಷದ ೯೭ ಸಾವಿರದ  ೫೩೫ಕ್ಕೆ ಏರಿಕೆಯಾಗಿದೆ.  ದೇಶದಲ್ಲಿ ಕೊರೊನಾ  ಸಾಂಕ್ರಾಮಿಕ  ಕಾಣಿಸಿಕೊಂಡ  ನಂತರ ದಿನವೊಂದರಲ್ಲಿ ಪತ್ತೆಯಾಗಿರುವ  ಅತಿ ಹೆಚ್ಚು ಪ್ರಕರಣಗಳಾಗಿವೆ. 

ಕಳೆದ  ೨೪ ಗಂಟೆಗಳಲ್ಲಿ ೩೯೬ ಮಂದಿ  ಸೋಂಕಿನಿಂದ ಮೃತಪಟ್ಟಿದ್ದು, ಈವರೆಗೆ  ಸಾವನ್ನಪ್ಪಿದವರ ಸಂಖ್ಯೆ  ಎಂಟು ಸಾವಿರದ ೪೯೮ಕ್ಕೆಏರಿದೆ. ದೇಶದಲ್ಲಿ  ಸೋಂಕಿನಿಂದ  ಮೃತಪಡುತ್ತಿರುವವರ  ಪ್ರಮಾಣ ೨.೮೫ರಷ್ಟಿದೆ.ಈ ನಡುವೆ  ಭಾರತೀಯ ವೈದ್ಯಕೀಯ ಸಂಶೋಧನಾ  ಪರಿಷತ್ ? ಐಸಿಎಂಆರ್,  ಕಳೆದ ೨೪ ಗಂಟೆಗಳಲ್ಲಿ  ದೇಶಾದ್ಯಂತ  ೧ ಲಕ್ಷದ ೫೦ ಸಾವಿರದ ೩೦೫  ಕೊರೊನಾ  ವೈರಸ್ ಮಾದರಿಗಳನ್ನು   ದೇಶದ  ವಿವಿಧ ಪ್ರಯೋಗಾಲಯಗಳಲ್ಲಿ  ನಡೆಸಲಾಗಿದೆ ಎಂದು ತಿಳಿಸಿದೆ.ಇದರಿಂದಾಗಿ  ದೇಶದಲ್ಲಿ ಈವರೆಗೆ  ೫೨ಲಕ್ಷ ೧೩ ಸಾವಿರದ ೧೪೦ ಪರೀಕ್ಷೆಗಳನ್ನು ನಡೆಸಲಾಗಿದೆ.  ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳಿಗೆ ಕೋವಿಡ್ -೧೯ ಪರೀಕ್ಷೆಗೆ  ಅನುಮತಿ ನೀಡಿ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ದೇಶದಲ್ಲಿ ಪ್ರಸ್ತುತ   ೬೩೭ ಸರ್ಕಾರಿ ಹಾಗೂ ೨೪೦ ಖಾಸಗಿ  ಪ್ರಯೋಗಾಲಯಗಳು ಸೇರಿ   ಒಟ್ಟು ೮೭೭ ಪ್ರಯೋಗಾಲಯಗಳಿಗೆ ಕೋವಿಡ್ -೧೯ ಪರೀಕ್ಷೆ ನಡೆಸಲು  ಅನುಮತಿ ನೀಡಲಾಗಿದೆ ಎಂದು ಐ ಸಿ ಎಂ ಆರ್  ತಿಳಿಸಿದೆ.