ಕಿತ್ತೂರು ಸೈನಿಕ ಶಾಲೆಗೆ ಎಕ್ಸಲಂಟ್‌ನ 95 ವಿದ್ಯಾರ್ಥಿಗಳು ಆಯ್ಕೆ

ಕಿತ್ತೂರು ಸೈನಿಕ ಶಾಲೆಗೆ ಎಕ್ಸಲಂಟ್‌ನ 95 ವಿದ್ಯಾರ್ಥಿಗಳು ಆಯ್ಕೆ 95 Excellent students selected for Kittur Sainik School


ವಿಜಯಪುರ 22: ವರ್ಷ ವರ್ಷವು ಹೆಚ್ಚೆಚ್ಚು ಫಲಿತಾಂಶ ನೀಡುವುದರೊಂದಿಗೆ ರಾಜ್ಯದ ಜನರ ನೀರೀಕ್ಷೆಯನ್ನು ನಿಜ ಮಾಡುವ ಮೂಲಕ ಫಲಿತಾಂಶದ ನಾಗಲೋಟ ಮುಂದುವರಿಸಿದ ಎಕ್ಸಲಂಟ್ ಸಂಸ್ಥೆ ಅತ್ಯುತ್ತಮವಾದ ತರಬೇತಿಯನ್ನು ನೀಡುವ ಮೂಲಕ ಕಿತ್ತೂರು ಸೈನಿಕ ಶಾಲೆಗೆ 95 ವಿದ್ಯಾರ್ಥಿನಿಯರು ಆಯ್ಕೆಯಾಗುವಂತೆ ಮಾಡಿ ಮತ್ತೊಮ್ಮೆ ನಮ್ಮ ಗುಣಮಟ್ಟವನ್ನು ಸಾಬೀತು ಮಾಡಿದೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.  

ಇತ್ತೀಚೆಗೆ ಜರುಗಿದ 2026ನೇ ಸಾಲಿನ ಕಿತ್ತೂರು ಸೈನಿಕ ಶಾಲೆಯ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಕುರಿತು ಸಂತಸ ಹಂಚಿಕೊಂಡ ಅವರು; ಸೈನಿಕ, ಕಿತ್ತೂರು, ನವೋದಯ, ಆರ್‌ಎಂಎಸ್ ಸೇರಿದಂತೆ ಹತ್ತಾರು ಶಾಲೆಗಳಿಗೆ ಮಕ್ಕಳು ಆಯ್ಕೆಯಾಗಲು ನಾವು ನೀಡುವ ತರಬೇತಿಯನ್ನು ಇಡೀ ರಾಜ್ಯವೇ ಮೆಚ್ಚಿಕೊಂಡಿದೆ. ಅದೇ ಕಾರಣಕ್ಕಾಗಿ ಕರ್ನಾಟಕದ ಹಲವಾರು ಭಾಗಗಳಿಂದ ಮಕ್ಕಳನ್ನು ತಂದು ತರಬೇತಿಗೆ ಬಿಡುತ್ತಾರೆ.

ನಮ್ಮಲ್ಲಿರುವ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ತರಬೇತಿ ಹೊಂದಿದ ನುರಿತ ಶಿಕ್ಷಕ ಬಳಗ ನಿರಂತರ ಶ್ರಮ ಹಾಕಿ ಕಲಿಸುವ ಮೂಲಕ ಉತ್ತಮ ಫಲಿತಾಂಶ ನೀಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅದೇ ತೆರನಾಗಿ ಈ ಬಾರಿಯೂ ಸಹ ನೀರೀಕ್ಷಿತ ಫಲಿತಾಂಶ ನೀಡಿದ್ದು; 95 ವಿದ್ಯಾರ್ಥಿನಿಯರು ಕಿತ್ತೂರು ಸೈನಿಕ ಶಾಲೆಗೆ ಆಯ್ಕೆಯಾಗುವ ಮೂಲಕ ಸಂಸ್ಥೆಯ ಫಲಿತಾಂಶದ ಕೀರೀಟಕ್ಕೆ ಮತ್ತೊಂದು ಗರಿ ಸಿಕ್ಕಿಸಿದ್ದಾರೆ. ಆಯ್ಕೆಯಾದ ಮಕ್ಕಳಿಗೂ ಹಾಗೂ ಅವರಿಗೆ ತರಬೇತಿ ನೀಡಿದ ಬೋಧಕ ವರ್ಗಕ್ಕೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. 

ಸಿಂಚನಾ ಪಡಶೆಟ್ಟಿ, ಸುಕೃತಾ ಮಂಕಣಿ, ಸಂಸ್ಕೃತಿ ಬಾಬಾನಗರ, ಸನ್ನಿಧಿ ಎಚ್ಚರಸ್ವಾಮಿಮಠ, ಸ್ಪೂರ್ತಿ ಮಸಳಿ, ಬೃಂದಾ ಪೂಜಾರಿ, ಡಿ. ಭಕ್ತಿ, ಶ್ರಾವಣಿ ಮಸೂತಿ, ಅಪೂರ್ವಾ ರಾಠೋಡ, ಸಿಂಚನಾ ಪಾಟೀಲ, ಶ್ರೀನಿಧಿ ಝಳಕಿ, ಕ್ರಿಪಾನಿಧಿ ವೈದ್ಯಾ, ವೇದಾ ದಂಡಣ್ಣವರ, ವಚನಾ ಬಿರಾದಾರ, ರಶ್ಮೀ ಕಗ್ಗೋಡ, ಸಮನ್ವಿ ಕರಿಗಾರ, ಆದ್ಯಾ ಚೌಗಲೆ, ಶ್ರಾವಣಿ ಮುಂದಿನಮನಿ, ಸುಶ್ಮಿತಾ ಕರಿಹೊಳಿ, ಸಮಂತಾ ಹುಲಸಾಡ ಸೇರಿದಂತೆ 95 ವಿದ್ಯಾರ್ಥಿನಿಯರು ಉತ್ತಮ ಅಂಕಗಳನ್ನು ಪಡೆದು ಅತ್ತ್ಯುತ್ತಮ ಸಾಧನೆಗೈದಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಆಯ್ಕೆಯಾದ ಮಕ್ಕಳಿಗೆ ಶುಭಾಶಯಗಳನ್ನು ಸಲ್ಲಿಸಿದ್ದಾರೆ.