ಮಸ್ಕಟ್, ಏ 27, ಒಮನ್ ನಲ್ಲಿ ಮತ್ತೆ 93 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 1,998 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಹೊಸ 93 ಪ್ರಕರಣಗಳ ಪೈಕಿ 60 ಪ್ರಕರಣಗಳು ಒಮನ್ ನಾಗರಿಕರಲ್ಲದವರಲ್ಲಿ ಕಂಡು ಬಂದಿದೆ. ಇವರಿಗೆ ಸಮುದಾಯ ಸಂಪರ್ಕದಿಂದ ಸೋಂಕು ಹರಡಿರುವ ಸಾಧ್ಯತೆ ಇದು ಸಚಿವಾಲಯದ ಹೇಳಿಕೆ ತಿಳಿಸಿದೆ.ಭಾನುವಾರ ಸೋಂಕಿನಿಂದ ನಾಲ್ವರು ಚೇತರಿಸಿಕೊಂಡಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 333 ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಎಲ್ಲರೂ ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ಸಾರ್ವಜನಿಕ ಸ್ಥಳಗಳಿಗೆ, ಪೂಜಾ ಮಂದಿರಗಳಿಗೆ ಹೋಗದಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಜನರಲ್ಲಿ ಸಚಿವಾಲಯ ಮನವಿ ಮಾಡಿದೆ.