‘ಗುರುಕೃಪೆಯಿಂದಲೇ ಬಯಲ ಬೆಳಗು ಸಾಧ್ಯ’
92nd Birth Vardhanti Celebration of Sri Shantalinga Shivacharya Swamiji
ಅಮ್ಮಿನಬಾವಿಯ ಶ್ರೀಶಾಂತಲಿಂಗ ಶಿವಾಚಾರ್ಯರ 92ನೆಯ ವರ್ಧಂತಿ ನಿಮಿತ್ತ ಭಕ್ತರಿಂದ ತುಲಾಭಾರ
ಧಾರವಾಡ 14: ವೀರಶೈವ ದರ್ಶನದಲ್ಲಿ ಶ್ರೀಗುರುವು ಇಷ್ಟಲಿಂಗದ ಅನುಸಂಧಾನದ ಮೂಲಕ ಮೋಕ್ಷ ಮಾರ್ಗ ತಿಳಿಸುತ್ತಿದ್ದು, ಗುರುಕೃಪೆಯಿಂದಲೇ ಬಯಲ ಬೆಳಗು ಸಾಧ್ಯವಾಗುತ್ತದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ತಮ್ಮ ಶ್ರೀಮಠದಲ್ಲಿ ಬುಧವಾರ ಭಕ್ತ ಸಮೂಹ ಹಮ್ಮಿಕೊಂಡಿದ್ದ ಹಿರಿಯಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ 92ನೆಯ ವರ್ಧಂತಿ ಮಹೋತ್ಸವದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಸನ್ಮಾರ್ಗದ ಬೋಧನೆಯೊಂದಿಗೆ ಆಧ್ಯಾತ್ಮದ ಮೇರು ಮಾರ್ಗವನ್ನು ತೋರುವಾತನೇ ಶ್ರೀಗುರು ಎಂದೂ ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮೊರಬ ಜಡಿಮಠದ ಶ್ರೀಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಅನುಷ್ಠಾನ ಮೂರ್ತಿಗಳಾಗಿರುವ ಶ್ರೀಶಾಂತಲಿಂಗ ಶಿವಾಚಾರ್ಯರು ಶಿವಯೋಗ ಸಾಧನೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಎಲ್ಲ ಕಿರಿಯ ಶಿವಾಚಾರ್ಯರಿಗೆ ಆದರ್ಶದ ಗುರುಪರಂಪರೆಯ ಮಾರ್ಗದರ್ಶಕರಾಗಿ ಉಪದೇಶ ಮಾಡಿದ್ದಾರೆ ಎಂದರು.
ಆಶೀರ್ವಚನ ನೀಡಿದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಟ್ಟು-ಸಾವುಗಳಿಂದ ಮುಕ್ತರಾಗಬೇಕೆಂದರೆ ಸಾಕ್ಷಾತ್ಕಾರ ಸಂಪಾದಿಸಬೇಕು. ಭಕ್ತಗಣ ಗುರು ಸೇವೆಗೆ ತೆರೆದುಕೊಂಡಾಗಲೇ ಮುಕ್ತಿಯ ಮೆಟ್ಟಿಲೇರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಲೇಖಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು. ವಿಜಯಪುರದ ಶ್ರೀಬಸವಚೈತನ್ಯ ಸ್ವಾಮೀಜಿ ಇದ್ದರು.
ಶೋಭಾ ಯರಗಂಬಳಿಮಠ, ಪ್ರೇಮಾ ಶಿವಪ್ಪ ರುದ್ರಾಪೂರ, ಬಿ.ಸಿ. ಕೊಳ್ಳಿ, ಪವನಕುಮಾರ ಮಲ್ಲಿಕಾರ್ಜುನ ಕುಸೂಗಲ್ಲ, ಸುನೀಲ ಗುಡಿ, ಬಸಪ್ಪ ಉಗರಗೋಳ, ವಿಜಯನಗರ ಜಿಲ್ಲೆ ಹೊಳಗುಂದಿಯ ಗುರುಬಸವರಾಜ ಮತ್ತೂರಮಠ, ಅಕ್ಕಮಹಾದೇವಿ ಯರಗಂಬಳಿಮಠ, ಎಸ್.ಎಂ. ಪ್ರಶಾಂತರಾಜಗುರು, ತಿಮ್ಮಾಪೂರ ಗ್ರಾಮದ ಶ್ರೀಮಾರುತಿ ದೇವಸ್ಥಾನ ಸದ್ಭಕ್ತ ಮಂಡಳಿ ವತಿಯಿಂದ ಸಕ್ಕರೆ, ಬೆಲ್ಲ, ಅಕ್ಕಿ, ತೆಂಗಿನಕಾಯಿ, ರವೆ ಮತ್ತು ನಾಣ್ಯಗಳ ಮೂಲಕ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರ 9 ತುಲಾಭಾರಗಳು ಜರುಗಿದವು.ಗ್ರಾಮದೇವಿ ಸ್ಮರಣೆಯೊಂದಿಗೆ ಶೋಭಾ ಯರಗಂಬಳಿಮಠ ಅವರು 121 ಮುತ್ತೈದೆಯರಿಗೆ ಉಡಿತುಂಬಿದರು.
ದಿಗಂಬರ ಜೈನ್ ಸಮಾಜ ಟ್ರಸ್ಟ್ ಮುಖಂಡರು, ಸುಶಿಲಾತಾಯಿ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಳಗ, ಹುಬ್ಬಳ್ಳಿ ನವನಗರದ ಶ್ರೀಈಶ್ವರ ದೇವಸ್ಥಾನದ ಸದ್ಭಕ್ತರು, ತಿಮ್ಮಾಪೂರದ ಶ್ರೀಮಾರುತಿ ದೇವಸ್ಥಾನ ಸದ್ಭಕ್ತರು, ಸುರೇಂದ್ರ ದೇಸಾಯಿ, ಎಂ.ಸಿ. ಹುಲ್ಲೂರ, ಉಮೇಶ ಶಿರಕೋಳ, ಅಪ್ಪಣ್ಣ ದೇಶಪಾಂಡೆ, ಮಲ್ಲಪ್ಪ ಕುಸೂಗಲ್ಲ, ಶಿವಪ್ಪ ಹಂಚಿನಾಳ, ಬಸಣ್ಣ ಯಡಳ್ಳಿ, ಹಾರೋಬೆಳವಡಿಯ ರಾಮಣ್ಣ ಜಕ್ಕಣ್ಣವರ, ಶಾಂತಾದೇವಿ ಪುರಾಣಮಠ ಶ್ರೀಶಾಂತಲಿಂಗ ಶಿವಾಚಾರ್ಯರನ್ನು ಗೌರವಿಸಿದರು. ರುದ್ರಮ್ಮ ಬಸಯ್ಯ ಗುಡಿ ಅವರ ದಾಸೋಹ ಸೇವೆಯಲ್ಲಿ ಅನ್ನಸಂತರೆ್ಣ ಜರುಗಿತು. ವಿನಾಯಕ ಹಿರೇಮಠ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 