ಜಿಲ್ಲೆಯಾದ್ಯಂತ ರಾತ್ರಿ 8 ರಿಂದ ಬೆಳಿಗ್ಗೆ 5ರವರೆಗೆ ಕಫ್ಯರ್ೂ,ಭಾನುವಾರ ಸಂಪೂರ್ಣ ಲಾಕ್ಡೌನ್: ಡಿಸಿ

ಹಾವೇರಿ: ಜು.01:  ಜಿಲ್ಲೆಯಲ್ಲಿ ಕೋವಿಡ್-19 ವೈರಾಣು ಸೋಂಕಿನಿಂದ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಕರ್ಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಲು  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೃಷ್ಣ ಬಾಜಪೇಯಿ ಅವರು ಆದೇಶ ಹೊರಡಿಸಿದ್ದಾರೆ.

ಮಾಸ್ಕ್ ಕಡ್ಡಾಯ: ಸಾರ್ವಜನಿಕ ಸ್ಥಳಗಳು ಹಾಗೂ ಕೆಲಸದ ಸ್ಥಳಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭಗಳಲ್ಲಿ ಹಾಗೂ  ವಿವಾಹ ಕಾರ್ಯಕ್ರಮ, ಶವ ಸಂಸ್ಕಾರ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವಿವಾಹಕ್ಕೆ ಅನುಮತಿ ಕೋರಿ ತಹಶೀಲ್ದಾರಗೆ ಅಜರ್ಿ ಸಲ್ಲಿಸುವಾಗ ಮುಚ್ಚಳಿಕೆ ಸಲ್ಲಿಸುವುದು ಕಡ್ಡಾಯವಾಗಿದೆ. ಶವ ಸಂಸ್ಕಾರದಲ್ಲಿ 20 ಜನಕ್ಕಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ.  ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು, ಮದ್ಯಪಾನ, ಪಾನ್ ಬಿಡಾ, ಗುಟಕಾ ಹಾಗೂ ತಂಬಾಕು ಸೇವನೆ ನಿಷೇಧಿಸಲಾಗಿದೆ. ಮದ್ಯಮಾರಾಟ ಅಂಗಡಿ, ಪಾನ್, ಬಿಡಾ, ಗುಟಕಾ, ತಂಬಾಕು ಮಾರಾಟದ ಅಂಗಡಿಗಳ ಬಳಿ  ಸಾರ್ವಜನಿಕರು ಕನಿಷ್ಟ 06 ಅಡಿ ಅಂತರ ಕಾಪಾಡುವುದು ಹಾಗೂ ಅಂಗಡಿಗಳ ಬಳಿ ಐದಕ್ಕಿಂತ ಹೆಚ್ಚಿನ ಜನತೆ ನಿಲ್ಲದಂತೆ ಮಾಲಿಕರು ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.

ಕಂಟೈನಮೆಂಟ್ ಜೋನ್ಗಳಲ್ಲಿ  ಶಾಲಾ- ಕಾಲೇಜುಗಳು, ವಿವಿಧ ತರಬೇತಿ ಸಂಸ್ಥೆ ಆರಂಭಿಸುವುದನ್ನು ದಿನಾಂಕ 31-07-2020ರವರೆಗೆ ನಿಷೇಧಿಸಲಾಗಿದೆ. ಆದರೆ ಆನ್ಲೈನ್ ಶಿಕ್ಷಣ ಕೊಡಬಹುದಾಗಿದೆ. ಸಕರ್ಾರಿ ತರಬೇತಿ ಸಂಸ್ಥೆಗಳಿಗೆ ಇದೇ ಜುಲೈ 15 ರಿಂದ ಆಕಂಖ  ಇಲಾಖೆ ಹೊರಡಿಸುವ ಖಔಕ ಆಧಾರ ಅನುಮತಿಸಲಾಗುವುದು ಎಂದು ತಿಳಿಸಿದ್ದಾರೆ.

ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಅಗತ್ಯ ವಸ್ತು ಮತ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಚಟವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಆದರೆ ಕಂಟೈನ್ಮೆಂಟ್ ವಲಯಗಳಲ್ಲಿ ವಾಸಿಸುತ್ತಿರುವ ಎಸ್.ಎಸ್.ಎಲ್.ಸಿ. ವಿದ್ಯಾಥರ್ಿಗಳು ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ವೈದ್ಯಕೀಯ ತುತರ್ು ಸ್ಥಿತಿಗಳನ್ನು ಹೊರತುಪಡಿಸಿ ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ಜನರು ಈ ಪ್ರದೇಶದಿಂದ ಹೊರ ಹೋಗುವುದನ್ನು ನಿಷೇಧಿಸಲಾಗಿದೆ. 

 ದುರ್ಬಲ ವ್ಯಕ್ತಿಗಳ ರಕ್ಷಣೆ: 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗಭರ್ಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ ಮನೆಯಲ್ಲೇಯೇ ಇರಲು ಸೂಚಿಸಲಾಗಿದೆ.

  ಸಿನೆಮಾ ಹಾಲ್ಗಳು, ಜಿಮ್ನಾಷಿಯಿಂ, ಈಜುಕೊಳಗಳು, ಮನಜರಂಜನಾ ಉದ್ಯಾನವನಗಳು, ಚಿತ್ರಮಂದಿರಗಳು, ಬಾರಗಳು ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್ಗಳು ಮತ್ತು ಅಂತಹುದೇ ಸ್ಥಳಗಳಲ್ಲಿ ನಡೆಯುವ ಚಟುವಟಿಕೆಗಳನ್ನು ನಿರ್ಬಧಿಸಲಾಗಿದೆ. ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾಮರ್ಿಕ ಕಾರ್ಯಕ್ರಮಗಳು, ಇತರೆ ಗುಂಪುಗೂಡುವಿಕೆ, ದೊಡ್ಡ ಸಭೆಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ರಾತ್ರಿ ಕಫ್ಯೂ:  ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜೂನ್ 30ರ ಮಧ್ಯರಾತ್ರಿಯಿಂದ ಅ. 02-ರ ಮಧ್ಯರಾತ್ರಿವರೆಗೆ ಜಿಲ್ಲೆಯಾದ್ಯಂತ  ರಾತ್ರಿ ಕಫ್ಯರ್ೂ ಜಾರಿಯಲ್ಲಿರುತ್ತದೆ. 

ಈ ಕಫ್ಯರ್ೂ ಅವಧಿಯಲ್ಲಿ  ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ  ನಿಷೇಧಿಸಲಾಗಿದೆ ಹಾಗೂ ಈ ಅವಧಿಯಲ್ಲಿ ಬರುವ ಎಲ್ಲ ಭಾನುವಾರಗಳ ದಿನ ಜಿಲ್ಲೆಯಾದ್ಯಂತ ಪೂರ್ಣ ದಿನದ ಲಾಕ್ಡೌನ್ ಜಾರಿಮಾಡಲಾಗಿದೆ. ಈ ಕಫ್ಯರ್ೂ ದಿನ  ಅಗತ್ಯ ಸರಕು ಸಾಗಾಣಿಕೆ ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳನ್ನು ನಿರ್ಭಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸಕರ್ಾರದ ತುತರ್ು ಸೇವೆಗಳಲ್ಲಿ ತೊಡಗಿರುವ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಇಲಾಖೆ, ನಿಗಮ ಮಂಡಳಿಗಳು ಶನಿವಾರದ ದಿನ ಕಚೇರಿ ಆರಂಭ ಮಾಡದಂತೆ ಸೂಚನೆ ನೀಡಲಾಗಿದೆ. 

ಆರೋಗ್ಯ ಸೇತು ಆಪ್ ಬಳಕೆ: 

  ಪ್ರತಿಯೊಬ್ಬ ಸಾರ್ವಜನಿಕರು ಆರೋಗ್ಯ ಸೇತು  ಆಪ್ನ್ನು ಡೌನ್ಲೋಡ್ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಸೋಂಕಿನ ಸಂಭವನೀಯ ಅಪಾಯವನ್ನು ಮೊದಲೇ ಗುರುತಿಸಲು ಈ ಆಪ್ನಿಂದ ಅನುಕೂಲವಾಗಲಿದ್ದು, ಸಕರ್ಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರು, ಅಧಿಕಾರಿಗಳು, ಮುಖ್ಯಸ್ಥರು ಕಡ್ಡಾಯವಾಗಿ ಆಪ್ಗಳನ್ನು ಬಳಕೆಮಾಡಬೇಕು. ಮುಖ್ಯಸ್ಥರು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. 

  ಕೋವಿಡ್-19 ನಿರ್ವಹಣೆಯ ಲಾಕ್ಡೌನ್ ಕ್ರಮಗಳನ್ನು ರಾಷ್ಟ್ರೀಯ ನಿದರ್ೆಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಸೆಕ್ಷನ್ 51 ರಿಂದ 60ರ ಉಪಬಂಧಗಳು ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿನ ಕಾನೂನು ಕ್ರಮಕೈಗೊಳ್ಳಲಾಗುವುದು ಹಾಗೂ ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.