87 ವರ್ಷದ ಗುರ್ಲಾಪುರ ಅಜ್ಜಿಗೆ ಶಾಲೆಯಲ್ಲಿ ಸನ್ಮಾನ
87-year-old Gurlapur grandmother honored at school
ಗುರ್ಲಾಪುರ 28: ಇಲ್ಲಿನ ಪಿಎಂ ಶ್ರೀ ಶಾಸಕರ ಮಾದರಿ ಶಾಲೆ ಗುರ್ಲಾಪೂರ ಗ್ರಾಮದ ಹಿರಿಯ ಜೀವಿ ಚಿನ್ನವ ರಾಮಚಂದ್ರ ಕಂಬಾರ್ ಹಳೆಗನ್ನಡತಿ ವಿದ್ಯಾರ್ಥಿ ಎಂದೇ ಪ್ರಸಿದ್ಧ ಪಡೆದವರು 87 ವರ್ಷ ಕುಲಗೋಡದಲ್ಲಿ ಜನಮ ಪಡೆದು ಕೇವಲ 2ನೆ ತರಗತಿ ಉತ್ತೀರ್ಣರಾಗಿ ಕನ್ನಡ ಸಾಹಿತ್ಯದ ಪದಗಳು ನಾಟಕಗಳನ್ನ ಮತ್ತು ಮನೆಯ ಕಸೂತಿಗಳನ್ನ ಮಾಡುವ ಕಲೆಯಲ್ಲಿ ಪರಿಣಿತರು ಈ ದಿವಸ ನಮ್ಮ ಗುರ್ಲಾಪುರ್ ಶಾಸಕರ ಶಾಲೆಗೆ ಅವರನ್ನು ಆಹ್ವಾನಿಸಿ ಮಕ್ಕಳಿಗೆ ಅವರ ಕಿರು ಪರಿಚಯ ಮಾಡಿಕೊಡಲಾಯಿತು.
ಇದರ ಜೊತೆಗೆ ನಮ್ಮ ಗ್ರಾಮದ ಇಂತಹ ಎಲೆ ಮರಿ ಕಾಯಂತಿರುವಂತಹ ಹಿರಿಯ ಅಜ್ಜಿಯನ್ನು ಆಹ್ವಾನಿಸಿರುವಂತಹ ನಮ್ಮ ಶಾಲೆಯ ಮುಖ್ಯಪಾದ್ಯರಾದ ಬಿ ಬಿ ಸಸಾಲಟ್ಟಿ ಸರ್ ಇವರನ್ನು ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ನಮ್ಮ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಲ್ಪಿ ನೇಮಗೌಡರು ಇವರ ಅನುಪಸ್ಥಿತಿಯಲ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು. ಎಲ್ ಆರ್ ಸಾಲಿಮಠ ಸರ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು ಎಸ್ ಬಿ ದರೂರ್ ಸರ್ ಸ್ವಾಗತಿಸಿದರು.
ಬಿ ವೈ ಮೋಮಿನ್ ಗುರುಗಳು ಕಿರು ಪರಿಚಯವನ್ನು ಮಾಡಿಕೊಟ್ಟರು ಹಾಗೂ ಕುಮಾರಿ ಕವಿತಾ ಕಟಗಿ ಗುರುಮಾತೆ ಅವರು ವಂದಿಸಿದರು ಈ ಸಂದರ್ಭದಲ್ಲಿ ಗುರುಮಾತೆಗಳಾದಂತಹ ದೀಪಿಕಾ ನಡೋಣಿ ಜ್ಯೋತಿ ಕಲ್ಯಾಣಿ, ವಿದ್ಯಾಶ್ರೀ ನೇಮಗೌಡ ಸುನೀಲ್ ತುಪ್ಪದ , ಗಂಗಮ್ಮ ಕಂಬಾರ್. ಹಾಗೂ ಅಡುಗೆ ಸಿಬ್ಬಂದಿ ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 