ದಮಾಮ್ ನಿಂದ ಬೆಂಗಳೂರಿಗೆ ಬಂದಿಳಿದ 85 ಪ್ರಯಾಣಿಕರು

ಬೆಂಗಳೂರು, ಮೇ 21, ಕೋವಿಡ್-19 ಲಾಕ್ ಡೌನ್  ಪರಿಸ್ಥಿತಿಯಲ್ಲಿ ದಮಮ್ ನಿಂದ ಮೇ 20ರಂದು ರಾತ್ರಿ 9 ಗಂಟೆ ಸುಮಾರಿನಲ್ಲಿ  ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣಕ್ಕೆ ಬಂದಿಳಿದ ಏಳನೇ ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು ಸೇರಿದಂತೆ  ಒಟ್ಟು 85 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.  ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಬಂದಿಳಿದ ಒಟ್ಟು 85 ಮಂದಿ  ಪ್ರಯಾಣಿಕರಲ್ಲಿ ಆರು ಗರ್ಭಿಣಿಯರು, ಹತ್ತು ವರ್ಷದೊಳಗಿನ ನಾಲ್ಕು ಮಕ್ಕಳು ಸೇರಿದಂತೆ 67  ಪುರುಷರು ಮತ್ತು 18 ಮಹಿಳೆಯರು ಇದ್ದರು. ತಜ್ಞ ವೈದ್ಯರು  ಹಾಗೂ ಸಿಬ್ಬಂದಿಗಳು 85 ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಒಬ್ಬರಲ್ಲಿ ಕೊರೋನಾ  ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಅವರನ್ನು ಬೆಂಗಳೂರಿನ ರಾಜೀವ್ ಗಾಂಧಿ  ಆಸ್ಪತ್ರೆಗೆ ಕ್ವಾರಂಟೈನ್ ಗಾಗಿ ಕಳುಹಿಸಿಕೊಡಲಾಗಿದೆ.   84  ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್ ಗಾಗಿ ಹೋಟೆಲ್ ಗಳಿಗೆ ಕಳುಹಿಸಿಕೊಡಲಾಗಿದೆ  ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.