ಜಗದ್ಗುರುಗಳ 84ನೇ ಪುಣ್ಯಸ್ಮರಣೆ ಕಾರ್ಯಕ್ರಮ

ಬಳ್ಳಾರಿ 16:   ನಗರದ ಬಸವೇಶ್ವರನಗರ ಬಡಾವಣೆಯ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಉಜ್ಜಯಿನಿಯ ಲಿಂ.ಸಿದ್ದಲಿಂಗ ಜಗದ್ಗುರುಗಳ 84ನೇ ಪುಣ್ಯಸ್ಮರಣೆ ನಿಮಿತ್ತ ಕಾರಣಿಕ ಮಹಾಪುರುಷ ಶ್ರೀ ಹಾನಗಲ್ ಕುಮಾರಸ್ವಾಮೀಗಳವರ ಪುರಾಣ ಕಾರ್ಯಕ್ರಮ ನಡೆಯುತ್ತಿದ್ದು, ಬಡಾವಣೆ ಸೇರಿದಂತೆ ನಾನಾ ಕಡೆಯಿಂದ ಸಾವಿರಾರು ಜನ ಭಕ್ತ ಸಮೂಹ ಹರಿದು ಬರುತ್ತಿದ್ದು, ಜ.19ರಂದು ಪುರಾಣ ಮಂಗಲೋತ್ಸವ ನಡೆಯಲಿದೆ. ಸವದತ್ತಿ ತಾಲೂಕಿನ ಉರಗೋಳ್ ಮಹಾಂತ ಸ್ವಾಮೀಜಿ, ಕಮ್ಮರಚೇಡ್ ಶ್ರೀಮಠದ ಶ್ರೀಕಲ್ಯಾಣ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಇತ್ತೀಚೆಗೆ ಆಶರ್ಿವಚನ ನೀಡಿದರು. 

ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯರ ಸೇವಾ ಸಮೀತಿ ಅಧ್ಯಕ್ಷ ಎಸ್.ಎಂ.ಷಡಾಕ್ಷರಯ್ಯ ಅವರು ಮಾತನಾಡಿ, ಶ್ರೀ ಉಜ್ಜಯಿನಿಯ ಲಿಂ.ಸಿದ್ದಲಿಂಗ ಜಗದ್ಗುರುಗಳ 84ನೇ ಪುಣ್ಯಸ್ಮರಣೆ ನಿಮಿತ್ತ ಕಾರಣಿಕ ಮಹಾಪುರುಷ ಶ್ರೀ ಹಾನಗಲ್ ಕುಮಾರಸ್ವಾಮೀಗಳವರ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜ.19ರಂದು ಮಂಗಲೋತ್ಸವ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀಮದ್ ಉಜ್ಜಯಿನಿ 1008 ಜಗದ್ಗುರು ಶ್ರೀಸಿದ್ದಲಿಂಗರಾಜ ದೇಶೀಕೇಂದ್ರ ಮಹಾ ಸ್ವಾಮೀಜಿ ಸಮಾರಂಭದ ಸಾನಿದ್ಯ ವಹಿಸಲಿದ್ದಾರೆ. ವಿವಿಧ ಮಠಗಳ ಸ್ವಾಮೀಜಿಗಳು, ವಿವಿಧ ಚುಣಾಯಿತ ಜನಪ್ರತಿನಿಧಿಗಳು ಸೇರಿದಂತೆ ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ. ಜ.19ರವರೆಗೆ ನಡೆಯಲಿರುವ ಪುರಾಣ ಪುರುಷ ಕುಮಾರಸ್ವಾಮೀಗಳವರ ಪುರಾಣವನ್ನು ಆಲಿಸಲು ಪ್ರತಿಯೋಬ್ಬರೂ ಭಾಗವಹಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಮೀತಿ ಎಲ್ಲ ಸದಸ್ಯರು, ವಿವಿಧ ಮುಖಂಡರು ಇತರರಿದ್ದರು.