ಧಾರವಾಡ: ಬರುವ ಜನೇವರಿ 4,5 ಹಾಗೂ 6 ರಂದು ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ 15 ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ಚುನಾಯಿತ ಪ್ರತಿನಿಧಿಗಳು, ಕಸಾಪ ಪ್ರತನಿಧಿಗಳು ಹಾಗೂ ಅಧಿಕಾರಿಗಳು ಈ ಸಮಿತಿಯಲ್ಲಿದ್ದಾರೆ. ನವೆಂಬರ್ 17 ರೊಳಗಾಗಿ ಉಪಸಮಿತಿಗಳು ತಮ್ಮ ಸಭೆಗಳನ್ನು ನಡೆಸಿ ಸಭೆಯ ನಡಾವಳಿಗಳನ್ನು ಸಲ್ಲಿಸಬೇಕು. ಸ್ವಾಗತ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲಿ ಮತ್ತೊಂದು ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಜಿ.ಪಂ. ಸಭಾಂಗಣದಲ್ಲಿಂದು ನಡೆದ ವಿವಿಧ ಸಮಿತಿಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮ್ಮೇಳನದ ಯಶಸ್ವಿಗೆ ಎಲ್ಲ ಸಮಿತಿಗಳು ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸುವುದು ಮುಖ್ಯವಾಗಿದೆ. ಉಪಸಮಿತಿಗಳಿಗೆ ಚುನಾಯಿತ ಪ್ರತಿನಿಧಿಗಳನ್ನು ಅಧ್ಯಕ್ಷರನ್ನಾಗಿ, ವಿವಿಧ ಇಲಾಖೆಯ ಅಧಿಕಾರಿಗಳನ್ನು ಕಾಯರ್ಾದ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಾಯರ್ಾಧ್ಯಕ್ಷರುಗಳು ಚುನಾಯಿತ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ಉಪಸಮಿತಿ ಸಭೆ ನಡೆಸಬೇಕು. ಸಮಿತಿಯ ನಡಾವಳಿ ಹಾಗೂ ಸಲಹೆಗಳನ್ನು ಕ್ರಿಯಾಯೋಜನೆ ಅಥವಾ ಪ್ರಸ್ತಾವನೆ ರೂಪದಲ್ಲಿ ಮುಖ್ಯ ಸಮಿತಿಗೆ ಸಲ್ಲಿಸಬೇಕು. ಈಗಾಗಲೇ ಸಮ್ಮೇಳನ ಸಿದ್ಧತೆಗಾಗಿ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಉಪಸಮಿತಿಗಳು ತಮ್ಮ ಸದಸ್ಯರನ್ನೊಳಗೊಂಡ ವಾಟ್ಸ್ಪ್ ಗ್ರೂಪ್ಗಳನ್ನು ರಚಿಸಿಕೊಂಡು ನಿರಂತರವಾಗಿ ಸಂಪರ್ಕದಲ್ಲಿರಬೇಕು. ಯಾವುದೇ ಸಂದೇಹ ಅಥವಾ ಮಾರ್ಗದರ್ಶನ ಬೇಕಿದ್ದರೆ ತ್ವರಿತವಾಗಿ ಮುಖ್ಯ ಸಮಿತಿ ಅಥವಾ ಸ್ವಾಗತ ಸಮಿತಿಗೆ ಸಂಪಕರ್ಿಸಿ ಪರಿಹರಿಸಿಕೊಳ್ಳಬಹುದು ಎಂದರು.
ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಸತೀಶ್.ಬಿ.ಸಿ. ಮಾತನಾಡಿ ವೇದಿಕೆಯ ಕಾರ್ಯಕ್ರಮ ಆಮಂತ್ರಣ ಪತ್ರಿಕೆಯನ್ನು ರೂಪಿಸುವುದರಿಂದ ಹಿಡಿದು ಎಲ್ಲ ಕಾರ್ಯಗಳು ಶಿಷ್ಟಾಚಾರದ ಪ್ರಕಾರ ನಡೆಯಬೇಕು. ಈಗಾಗಲೇ ಹಿಂದಿನ ಸಮ್ಮೇಳನ ಮತ್ತು ಸಕಾರದ ಇತರ ಬೃಹತ್ ಕಾರ್ಯಕ್ರಮಗಳಲ್ಲಿ ಜವಾಬ್ದಾರಿ ನಿರ್ವಹಿಸಿದ ಅಧಿಕಾರಿಗಳು ತಮ್ಮ ಅನುಭವಗಳನ್ನು ಆಧರಿಸಿ ಸಲಹೆಗಳನ್ನು ನೀಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಮಹಾನಗರ ಉಪಪೊಲೀಸ್ ಆಯುಕ್ತ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಕುಮಾರ್, ಜಿಲ್ಲಾ ಪಂಚಾಯತ್ ಉಪಕಾರ್ಯದಶರ್ಿ ಎಸ್.ಜಿ. ಕೊರವರ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಮಿತಿಗಳ ರಚನೆ: ಸ್ವಾಗತ ಸಮಿತಿ: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗೌರವಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ. ದೇಶಪಾಂಡೆ ಅಧ್ಯಕ್ಷರು, ಜಿಲ್ಲಾಧಿಕಾರಿ ದೀಪಾ ಚೋಳನ್ ಕಾರ್ಯಧ್ಯಕ್ಷರು.
ವಸತಿ ಮತ್ತು ಸಾರಿಗೆ ಸಮಿತಿ : ಕಾಯರ್ಾಧ್ಯಕ್ಷರು- ಅಪರ ಜಿಲ್ಲಾಧಿಕಾರಿಗಳು.
ಆಹಾರ ಸಮಿತಿ : ಕಾಯರ್ಾಧ್ಯಕ್ಷರು- ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ.
ಸ್ವಚ್ಛತಾ ಮತ್ತು ನೈರ್ಮಲ್ಯತೆ ಸಮಿತಿ: ಕಾಯರ್ಾಧ್ಯಕ್ಷರು- ಉಪ ಆಯುಕ್ತರು, ಕಂದಾಯ ವಿಭಾಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ.
ಮೆರವಣಿಗೆ ಸಮಿತಿ: ಕಾಯರ್ಾಧ್ಯಕ್ಷರು- ಉಪ ಪೊಲೀಸ್ ಆಯುಕ್ತರು, ಅಪರಾಧ ಮತ್ತು ಸಾರಿಗೆ, ಹುಬ್ಬಳ್ಳಿ-ಧಾರವಾಡ ಮಹಾನಗರ,
ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಕಾರಿ ಸಮಿತಿ: ಕಾಯರ್ಾಧ್ಯಕ್ಷರು- ಅಬಕಾರಿ ಅಧೀಕ್ಷಕರು, ಧಾರವಾಡ
ವೇದಿಕೆಯ ಕಾರ್ಯಕಾರಿ ಸಮಿತಿ : ಕಾಯರ್ಾಧ್ಯಕ್ಷರು-ಅಧೀಕ್ಷಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ.
ಆರೋಗ್ಯ ಸಮಿತಿ : ಕಾಯರ್ಾಧ್ಯಕ್ಷರು- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು.
ಪ್ರಚಾರ ಸಮಿತಿ : ಕಾಯರ್ಾಧ್ಯಕ್ಷರು - ಹಿರಿಯು ಸಹಾಯಕ ನಿದರ್ೆಶಕರು, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ.
ನೋಂದಣಿ ಸಮಿತಿ : ಕಾಯರ್ಾಧ್ಯಕ್ಷರು - ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ.
ವಾಣಿಜ್ಯ ಮಳಿಗೆ ಸಮಿತಿ : ಕಾಯರ್ಾಧ್ಯಕ್ಷರು - ಮುಖ್ಯ ಆಡಳಿತಾಧಿಕಾರಿಗಳು, ಕಿಮ್ಸ್, ಹುಬ್ಬಳ್ಳಿ.
ಅಲಂಕಾರ ಸಮಿತಿ : ಕಾಯರ್ಾಧ್ಯಕ್ಷರು - ಅಧೀಕ್ಷಕ ಅಭಿಯಂತರರು, ಹೆಸ್ಕಾಂ, ಹುಬ್ಬಳ್ಳಿ
ಮಹಿಳಾ ಸಮಿತಿ : ಕಾಯರ್ಾಧ್ಯಕ್ಷರು - ಉಪ ನಿಬಂಧಕರು, ಸಹಕಾರ ಸಂಘಗಳು, ಧಾರವಾಡ
ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ ಸಮಿತಿ : ಕಾಯರ್ಾಧ್ಯಕ್ಷರು- ಜಂಟಿ ನಿದರ್ೆಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ರಾಯಾಪುರ, ಧಾರವಾಡ
ಸ್ವಯಂ ಸೇವಕರ ಉಸ್ತುವಾರಿ ಸಮಿತಿ : ಕಾಯರ್ಾಧ್ಯಕ್ಷರು-ಕುಲಸಚಿವರು, ಕನರ್ಾಟಕ ವಿಶ್ವವಿದ್ಯಾಲಯ, ಧಾರವಾಡ