ಸ್ಪೇನ್ ನಲ್ಲಿ ಒಂದೇ ದಿನದಲ್ಲಿ ಕೊರೋನಾ ಸೋಂಕಿಗೆ 832 ಮಂದಿ ಬಲಿ

ಮ್ಯಾಡ್ರಿಡ್, ಮಾ 28,ಕಳೆದ 24 ಗಂಟೆಗಳಲ್ಲಿ ಸ್ಪೈನ್ ದೇಶದಲ್ಲಿ 832 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದ ದೇಶದಲ್ಲಿ ಮೃತರ ಸಂಖ್ಯೆ 5690ಕ್ಕೇರಿಕೆಯಾಗಿದೆ.,
ಜೊತೆಗೆ, ಒಂದೇ ದಿನದಲ್ಲಿ 8,189 ಸೋಮಕಿತ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು  ಸಂಖ್ಯೆ 72,200 ತಲುಪಿದೆ.  ಇವರಲ್ಲಿ 4500 ಜನರು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಇಲ್ಲಿಯವರೆಗೆ ಒಟ್ಟು 12300 ಜನರು ಗುಣಮುಖರಾಗಿದ್ದಾರೆ. ರಾಜಧಾನಿ ಮ್ಯಾಡ್ರಿಡ್ ಅತಿ ಹೆಚ್ಚು ಸೋಂಕಿತ ಪ್ರದೇಶವಾಗಿ ಇಲ್ಲಿಯವರೆಗೆ 21500 ಪ್ರಕರಣ ಪತ್ತೆಯಾಗಿದೆ. ಇದರಿಂದ ಸ್ಪೈನ್ ವಿಶ್ವದಲ್ಲೇ ನಾಲ್ಕನೇ ಅತಿ ಹೆಚ್ಚು ಸೋಂಕಿತ ದೇಶವಾಗಿ ಹೊರಹೊಮ್ಮಿದೆ. ಇದರ ನೆರೆಯ ಇಟಲಿ ದೇಶದಲ್ಲಿ ಒಟ್ಟು 9134 ಜನರು ಮೃತಪಟ್ಟಿದ್ದು, 86,468 ಜನರಿಗೆ ಸೋಂಕು ತಗುಲಿದೆ.