ಕ್ರಿಶ್ಚಿಯನ್ ಅಸೆಂಬ್ಲಿ ಗಾಸ್ಪೆಲ್ ಚರ್ಚ್‌ನ 81ನೇ ವಾರ್ಷಿಕೋತ್ಸವ
81st Anniversary of Christian Assembly Gospel Church
ಬಳ್ಳಾರಿ 17: ನಗರದ ಕೋಟೆಯ ಪ್ರದೇಶದಲ್ಲಿರುವ ಕ್ರಿಶ್ಚಿಯನ್ ಅಸೆಂಬ್ಲಿ ಗಾಸ್ಪೆಲ್ ಸೆಂಟರ್ ಚರ್ಚಿನ 81.ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಅಸೆಂಬ್ಲಿಯ ಪಾಸ್ಟರ್ ಆದ ಡೇವಿಡ್ ನೆರೆಲ್ಲ ಅವರು ಮಾತನಾಡಿ, ಈ ಚರ್ಚನ್ನು 1944 ರಲ್ಲಿ ಫಾಸ್ಟರ್ ಎಸ್.ಪ್ರಭುದಾಸ್ ಪ್ರಾರಂಬಿಸಿದರು. ನಂತರ ಅವರು ಕಾರಣಾಂತರಗಳಿಂದ ಆಂಧ್ರ್ರದೇಶದ ನಂದ್ಯಾಲ್ ಗೆ 1956 ರಲ್ಲಿ ಹೋಗುತ್ತಾರೆ, ನಂತರ ಆ ಒಂದು ಚರ್ಚಿನ ಎಲ್ಲಾ ಕಾರ್ಯಗಳನ್ನು ಫಾಸ್ಟರ್ ಹೆನ್ರಿ ಸಾಲ್ಮನ್ ನೆರೆಲ್ಲ ರವರು 31 ವರ್ಷಗಳ ಕಾಲ ಅವರು ನಡೆಸಿಕೊಂಡು ಬಂದರು. 1987ರಲ್ಲಿ ಅವರು ಸ್ವರ್ಗಸ್ಥರಾದ ನಂತರ 1991 ರಿಂದ ಈ ದಿನದವರೆಗೆ ಫಾಸ್ಟರ್ ಡೇವಿಡ್ ನೆರೆಲ್ಲ ರವರು ಈ ಚರ್ಚನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಈ ಚರ್ಚಿನಲ್ಲಿ ಸುಮಾರು 140 ರಿಂದ - 150 ರಷ್ಟು ಕ್ರೈಸ್ತ ಸಮುದಾಯದ ಜನರು ಮತ್ತು ಚಿಕ್ಕ ಮಕ್ಕಳು ತಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಂದು ಆಗಸ್ಟ್ 15 ರಂದು ವಾರ್ಷಿಕೋತ್ಸವದ ನಿಮಿತ್ತ ಸಂಘದ ಜನರು ಸೇರಿ ಸ್ವಾತಂತ್ರ ದಿನೋತ್ಸವವನ್ನು ಸಹ ದೇಶದ ಭಕ್ತಿ ಗೀತೆಯನ್ನು ಹಾಡಿ 79ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು ಎಂದು ಫಾಸ್ಟರ್ ನೆರೆಲ್ಲಾ ಡೇವಿಡ್ ತಿಳಿಸಿದರು. ಈ ಚರ್ಚ್ ಆದೀನದಲ್ಲಿ ಬಳ್ಳಾರಿ ನಗರದ 100 ಕಿ.ಮೀ ಅಂತರದಲ್ಲಿ ಒಟ್ಟು 19.ಚರ್ಚ್ ಗಳು ಇರುತ್ತವೆ, ಅವುಗಳು ಕಂಪ್ಲಿ, ರಾಯದುರ್ಗ ಹಾಗು ಕಲ್ಯಾಣದುರ್ಗ ತಾಲೂಕು ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ ಈ 19 ಚರ್ಚ್ ಗಳನ್ನು ಗಳನ್ನು ಒಟ್ಟು 13 ಜನ ಫಾಸ್ಟರ್ ಗಳು ನಡೆಸುತ್ತಿದ್ದಾರೆ ಎಂದು ಭಾಗ್ಯಲಕ್ಷ್ಮಿ ರವರು ಮಾಹಿತಿ ನೀಡಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 