ಬಿಜೆಪಿ ಕಾರ್ಯಾಲಯದಲ್ಲಿ ೮೦ನೇ ಸ್ವಾತಂತ್ರ‍್ಯೋತ್ಸವ ಆಚರಣೆ: ಮಾಜಿ ಯೋಧರಿಗೆ ಸನ್ಮಾನ

ಬಿಜೆಪಿ ಕಾರ್ಯಾಲಯದಲ್ಲಿ ೮೦ನೇ ಸ್ವಾತಂತ್ರ‍್ಯೋತ್ಸವ ಆಚರಣೆ: ಮಾಜಿ ಯೋಧರಿಗೆ ಸನ್ಮಾನ 80th Independence Day Celebrated at BJP Office: Retired Soldier Honoured

ಯಮಕಣಮರಡಿ, ಆ. 18: ದಾದಾಬಾನಹಟ್ಟಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4ರ ಪಕ್ಕದಲ್ಲಿರುವ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಆ. 15ರಂದು 80ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಕ್ಕೆ ನಮನ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮದ ನಿವೃತ್ತ ಯೋಧರಾದ ಮಹಾದೇವ ಮೊಕಾಶಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಹಾಗೂ ಚಿಕ್ಕೋಡಿ ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಸವರಾಜ ಹೊಂದರಿ, ರಾಜಣ್ಣ ಮಠಪತಿ, ಸಂತೋಷ ಪಾಟೀಲ, ಸಂತೋಷ ಬೋಯಿ, ಪ್ರವೀಣ ಬಂಗಿ, ಶ್ರೀಶೈಲ ಮಠಪತಿ, ಸ್ಥಳೀಯ ಮುಖಂಡರಾದ ಈರಣ್ಣ ಗೊರವ, ಶ್ರೀಶೈಲ ಯಮಕಣಮರಡಿ, ಮಹಾದೇವ ಮಜತಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಯುವ ಅಭಿಮಾನಿಗಳು ಉಪಸ್ಥಿತರಿದ್ದರು.