ಗುರ್ಲಾಪೂರದಲ್ಲಿ 80ನೇ ವಾರ್ಷಿಕ ಸಭೆ

   ಗುರ್ಲಾಪೂರದಲ್ಲಿ 80ನೇ ವಾರ್ಷಿಕ ಸಭೆ 80th Annual Meeting in Gurlapur


ಗುಲಾರಪೂರ, ಸೆ.21: ಸ್ಥಳೀಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 80ನೇ ವಾರ್ಷಿಕ ಮಹಾಸಭೆ ಸೆ.21ರಂದು ಸಂಜೆ 4 ಗಂಟೆಗೆ ಸಂಘದ ಕಚೇರಿಯಲ್ಲಿ ನಡೆಯಲಿದೆ.  

ಸಭೆಯಲ್ಲಿ ಅಧ್ಯಕ್ಷರ ಆಯ್ಕೆ, ಹಿಂದಿನ ಸಭೆಯ ಠರಾವುಗಳ ಓದು, ಸಂಘದ ಲೆಕ್ಕಪರಿಶೋಧನಾ ವರದಿ ಮಂಡನೆ, ಮುಂದಿನ ಸಾಲಿನ ಲೆಕ್ಕಪರಿಶೋಧಕರ ನೇಮಕ ಹಾಗೂ 2025-26ನೇ ಸಾಲಿನ ಜಮಾ-ಖರ್ಚು ಮತ್ತು ಲಾಭ-ನಷ್ಟ ಪತ್ರಿಕೆಗೆ ಅನುಮೋದನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.  

ಸಂಘವು 2025-26ನೇ ಸಾಲಿನ ಲಾಭಾಂಶವನ್ನು ಸದಸ್ಯರಿಗೆ ವಿತರಿಸುವುದಿಲ್ಲ. ಸಂಘದ ಅಭಿವೃದ್ಧಿಗೆ ಸದಸ್ಯರು ತಮ್ಮ ಸಲಹೆ-ಸೂಚನೆಗಳನ್ನು ನೀಡಬೇಕು. ಅಧ್ಯಕ್ಷರ ಅನುಮತಿಯ ಮೇರೆಗೆ ಇತರೆ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಬಿ. ಹೊಸೂರ ತಿಳಿಸಿದ್ದಾರೆ.