1 ನಿಮಿಷ ಮುಕ್ತ ಗಾಡಾ ಬಂಡಿ ಸ್ಪರ್ಧೆಗೆ ಚಾಲನೆ

1 ನಿಮಿಷ ಮುಕ್ತ ಗಾಡಾ ಬಂಡಿ ಸ್ಪರ್ಧೆಗೆ ಚಾಲನೆ  1-minute open bullock cart race flagged off

ಲೋಕದರ್ಶನ ವರದಿ 

  ಯರಗಟ್ಟಿ 19: ಪಟ್ಟಣದ ಖಾದಿಲಿಂಗೇಶ್ವರ ಗಜಾನನ ಯುವಕ ಮಂಡಳಿ ಹಾಗೂ ಭಗತ್ಸಿಂಗ್ ಯುವಕ ಮಂಡಳಿ ಆಶ್ರಯದಲ್ಲಿ ಆಯೋಜಿಸಿದ್ದ ಸಾಹಸಮಯ 1 ನಿಮಿಷ ಮುಕ್ತ ಗಾಡಾ ಬಂಡಿ ಸ್ಪರ್ಧೆಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಸಂಸ್ಕೃತಿ, ಜಾನಪದ ಕ್ರೀಡೆ ಹಾಗೂ ರೈತರ ಶಕ್ತಿಯ ಸಂಕೇತವಾಗಿರುವ ಗಾಡಾ ಬಂಡಿ ಸ್ಪರ್ಧೆಗಳು ಗ್ರಾಮೀಣ ಯುವಕರಲ್ಲಿ ಉತ್ಸಾಹ ಹೆಚ್ಚಿಸುತ್ತವೆ ಎಂದರು. ರೋಮಾಂಚನಕಾರಿ ಸ್ಪರ್ಧೆಯನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬನ್ನವರ, ಬೆಮೂಲ್ ನಿರ್ದೇಶಕ ಶಂಕರ ಇಟ್ನಾಳ, ಪ.ಪಂ. ಸದಸ್ಯ ನಿಖಿಲ್ ಪಾಟೀಲ ಸೇರಿದಂತೆ ಯುವಕ ಮಂಡಳಿಯ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.