80 ಕಿಲೋವ್ಯಾಟ್ ಸಾಮರ್ಥ್ಯದ ಸೌರಶಕ್ತಿ ವ್ಯವಸ್ಥೆ ಯಶಸ್ವಿ: ಮಿಲ್ಲರ್

ಲೋಕದರ್ಶನ ವರದಿ

ಹಾವೇರಿ18 : ಭಾರತದಲ್ಲಿನ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಸೌರಶಕ್ತಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಜಿಲ್ಲೆಯ ಬ್ಯಾಡಗಿಯಲ್ಲಿರುವ ಕೇದಾರನಾಥ ಕೋಲ್ಡ್ ಸ್ಟೋರೇಜ್ ಮತ್ತು ಪ್ರಯಾಗ್ ಕೋಲ್ಡ್ ಸ್ಟೋರೇಜ್ ಸಂಸ್ಥೆಗಳಿಗಾಗಿ 80 ಕಿಲೋವ್ಯಾಟ್ ಸಾಮರ್ಥ್ಯದ ಎರಡು ಮೇಲ್ಛಾವಣಿ ಸೌರಶಕ್ತಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ ಎಂದು ಆಬರ್್ ಎನಜರ್ಿ ಸಂಸ್ಥೆಯ ಸಿ.ಇ.ಒ. ಡೇಮಿಯನ್ ಮಿಲ್ಲರ್ ಹೇಳಿದರು.

              ನಗರದ ಖಾಸಗಿ ಹೊಟೇಲಿನಲ್ಲಿ ಪತ್ರಿಕಾಗೋಷ್ಠಿ  ಉದ್ದೇಶಿಸಿ ಮಾತನಾಡಿದ ಅವರು  ಪ್ರತಿ ವರ್ಷ ಸರಾಸರಿ 1.5 ಲಕ್ಷ ಯೂನಿಟ್ಗಳಷ್ಟು ಮಾಲಿನ್ಯರಹಿತ ಶಕ್ತಿಯನ್ನು ಉತ್ಪಾದಿಸುತ್ತದೆ.ಇದು ಶೈತ್ಯಾಗಾರಗಳನ್ನು ನಡೆಸಲು ಬೇಕಾಗುವ ವಿದ್ಯುತ್ತಿನ ವೆಚ್ಚವನ್ನು ಕಡಿಮೆ ಮಾಡುತ್ತಿದೆ.

      ಆಬರ್್ ಎನಜರ್ಿ ಸಂಸ್ಥೆಯ ಮೇಲ್ಛಾವಣಿ ಸೌರ ಶಕ್ತಿ ವ್ಯವಸ್ಥೆಯಡಿ ಈ ವರಗೆ ಕಂಡು-ಕೇಳರಿಯದ ಸಬ್ಸಿಡಿ ರಹಿತ ಬಂಡವಾಳ ಹೂಡಿಕೆಯ ಮೇಲೆ 3-4 ವರ್ಷಗಳಲ್ಲಿ ಪ್ರತಿಫಲವನ್ನು ನೀಡುತ್ತದೆ. 

  ಭಾರತದಲ್ಲಿನ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಸೌರಶಕ್ತಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಆಥರ್ಿಕ ನೆರವಿನ ಅಗತ್ಯವಿರುವುದರಿಂದ, ಆಬರ್್ ಎನಜರ್ಿ ಸಂಸ್ಥೆಯು ಅವರ ಪ್ರತಿಫಲಗಳನ್ನು ಪಡೆಯುವ ಅವಧಿಗೆ ಅನುಸಾರವಾಗಿ ಸೌರ ಸಾಲವನ್ನು ನೀಡುತ್ತದೆ. ಈ ಅವಧಿಯ ನಂತರ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಬಳಸುವ ಎಲ್ಲಾ ಸೌರ ಉತ್ಪಾದಿತ ವಿದ್ಯುತ್ತು ಅವರಿಗೆ ಉಚಿತವಾಗಿರುತ್ತದೆ ಕನರ್ಾಟಕ ರಾಜ್ಯವು ಮೆಣಸಿನಕಾಯಿ ಉತ್ಪಾದನೆಯಲ್ಲಿ ಭಾರತ ದೇಶದಲ್ಲೇ ಮೂರನೆಯ ಸ್ಥಾನವನ್ನು ಪಡೆದುಕೊಂಡಿದೆ. ಸ್ಪಧರ್ಾತ್ಮಕ ಬೆಲೆಗಳ ಮೂಲಕ ಶೈತ್ಯಾಗಾರ ಸೇವೆಗಳನ್ನು ನೀಡುವುದರ ಮೂಲಕ ನಮ್ಮ ಮಾರುಕಟ್ಟೆಯನ್ನು ಕಾಯ್ದುಕೊಳ್ಳುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ಸಿ.ಇ.ಒ. ಡೇಮಿಯನ್ ಮಿಲ್ಲರ್ ತಿಳಿಸಿದರು. ಕೇದಾರನಾಥ ಕೋಲ್ಡ್ ಸ್ಟೋರೇಜ್ ಸಂಸ್ಥೆಯ ಮಾಲೀಕ ವಿನಯ್ ಎಸ್ ಪಾಟೀಲ್ ಮತ್ತು ಪ್ರಯಾಗ್ ಕೋಲ್ಡ್ ಸ್ಟೋರೇಜ್ನ ಮ್ಯಾನೇಜಿಂಗ್ ಪಾಟರ್್ನರ್ ಶ್ರೀನಿವಾಸ ಬೆಟಗೇರಿ ಮಾತನಾಡಿ ಆಬರ್್ ಎನಜರ್ಿ ಸಂಸ್ಥೆಯಿಂದಾಗಿ ನಾವು ಈಗ ಪ್ರತಿ ದಿನ 400 ಯೂನಿಟ್ಗಳಷ್ಟು ಮಾಲಿನ್ಯ ರಹಿತ ವಿದ್ಯುತ್ತನ್ನು ಉತ್ಪಾದಿಸಬಹುದಾಗಿದೆ. ಇದರಿಂದ ಪ್ರತಿ ವರ್ಷ ರೂ. 5.5 ಲಕ್ಷಗಳಷ್ಟು ಹಣವನ್ನು ಉಳಿತಾಯ ಮಾಡುತ್ತಿದ್ದೇವೆ  ಎಂದರು.ಆಬರ್್ ಎನಜರ್ಿ ಸಂಸ್ಥೆಯ ಸುಧೀರ.ವಿಕಾಸ ಸೇರಿದಂತೆ ಕಾರ್ಯವೃಂದದವರು ಪಾಲ್ಗೊಂಡಿದ್ದರು.