ಎಸ್‌ಬಿಐ ಬ್ಯಾಂಕ್ ದರೋಡೆ: 21 ಕೋಟಿ ಚಿನ್ನ-1.5 ಕೋಟಿ ನಗದು ದೋಚಿ ಪರಾರಿ
8 teams formed to catch looting gang carrying guns: Lakshman Nimbargi
ಲೂಟಿಕೋರ ಬಂದೂಕು ಧಾರಿ ಗ್ಯಾಂಗ್ ಹಿಡಿಯಲು 8 ತಂಡಗಳ ರಚನೆ : ಲಕ್ಷಣ ನಿಂಬರಗಿ
ಚಡಚಣ 17; ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿರುವ ಕರ್ನಾಟಕ ರಾಜ್ಯದ ಕೊನೆಯ ಪಟ್ಟಣ ಮತ್ತು ಭೀಮಾತೀರ ಎಂದು ಕುಖ್ಯಾತಿ ಪಡೆದಿರುವ ಚಡಚಣ ತಾಲೂಕಿನಲ್ಲಿ ರಾಜ್ಯಾದ್ಯಂತ ಬೆಚ್ಚಿ ಬೀಳಿಸುತ್ತಿರುವ ಬ್ಯಾಂಕ್ ದರೋಡೆ ಪ್ರಕರಣಗಳ ಸಾಲಿಗೆ ಇದೀಗ ಚಡಚಣ ಪಟ್ಟಣದಎಸ್.ಬಿ.ಐ. ಶಾಖೆ ಕೂಡ ಸೇರೆ್ಡಯಾಗಿದೆ.
ವಿಜಯಪುರ ಜಿಲ್ಲೆಯ ಮನಗೂಳಿಯ ಬ್ಯಾಂಕ್ ಲೂಟಿ ಮಾಸುವ ಮುನ್ನವೆ ಸಿನಿಮಿಯಾ ಮಾದರಿಯಲ್ಲಿ ಮಂಗಳವಾರ ಸಂಜೆ 6.30ರಿಂದ 7.30ರ ನಡುವೆ ಭೀಮಾತೀರದ ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ನಡೆದ ಧಿಡೀರ್ ದರೋಡೆ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಎಸ್.ಪಿ.ಲಕ್ಷಣ ನಿಂಬರಗಿ ಪತ್ರಿಕಾಗೋಷ್ಟೀಯಲ್ಲಿ ಮಾತನಾಡಿ ಮಂಗಳವಾರ ಚಡಚಣ ಪಟ್ಟಣದ ಎಸ್.ಬಿ.ಐ.ಬ್ಯಾಂಕ್‌ನಲ್ಲಿ ಸಂಜೆ 6.30 ರಿಂದ 7.30 ರ ಸಮಯಕ್ಕೆ ಬ್ಯಾಂಕ್‌ಗೆ ಪ್ರವೇಶಿಸಿದ್ದ 5 ಮಂದಿ ಮುಸುಕುಧಾರಿ ದರೋಡೆಕೋರರು, ಸಿಬ್ಬಂದಿ ಹಾಗೂ ಎಟಿಎಂ ಸೆಕ್ಯುರಿಟಿ ಗಾರ್ಡ್‌ರನ್ನು ಪಿಸ್ತೂಲ್ ತೋರಿಸಿ ಬೆದರಿಸಿ, ಕೈ-ಕಾಲು ಕಟ್ಟಿ ಒಂದು ಕೊಠಡಿಯಲ್ಲಿ ಕೂಡಿಹಾಕಿ, ಸುಮಾರು 20 ಕೆಜಿ ಚಿನ್ನಾಭರಣ (21 ಕೋಟಿ ಮೌಲ್ಯ) ಹಾಗೂ 1.5 ಕೋಟಿ ನಗದು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಿದರು. ಎಷ್ಟು ಲೂಟಿ ಮಾಡಿದ್ದಾರೆ ಎನ್ನುವುದು ಪೋಲಿಸ್ ತನಿಖೆಯಿಂದ ಗೊತ್ತಾಗುತ್ತದೆ. ಬ್ಯಾಂಕ ಸಿಬ್ಬಂಧಿ ನಿರ್ಧಿಷ್ಠ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಕಳೆದ 3 ತಿಂಗಳಿಂದ ಬ್ಯಾಂಕ್‌ನಲ್ಲಿ ಶಾಶ್ವತ ಸೆಕ್ಯುರಿಟಿ ಗಾರ್ಡ್ ಇರಲಿಲ್ಲ.ದರೋಡೆಕೋರರು ಈ ಮೊದಲು ಮುಖಕ್ಕೆ ಮಾಸ್ಕ ಹಾಕಿಕೊಂಡು ಅನೇಕ ಬಾರಿ ಬ್ಯಾಂಕ ಸಿಬ್ಬಂಧಿಯ ಚಲನ ವಲನ ನೋಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ, ಬ್ಯಾಂಕಿಗೆ ದರೋಡೆ ವೇಳೆ ಗುಂಡು ಹಾರಿಸಿದ ಶಂಕೆ ವ್ಯಕ್ತವಾಗಿದ್ದು ಬ್ಯಾಂಕ್ ಒಳಗೆ ಬುಲೆಟ್ ಕ್ಯಾಪ್ ಪತ್ತೆ ಯಾಗಿದೆ ಆದರೆ ಗುಂಡಿನಿಂದ ಯಾವುದೆ ಪ್ರಾಣಪಾಯವಾಗಿಲ್ಲ ಎಂದರು.
ಸ್ಥಳೀಯ ಗ್ರಾಹಕ ಶ್ರೀಶೈಲ್ ಎಂಬಾತನು ಎಟಿಎಮ್ ನಲ್ಲಿ ಹಣ ಬಾರದ್ದಕ್ಕೆ ಸಿಬ್ಬಂಧಿ ಜೊತೆ ಮಾತಾಡುವ ಸಮಯದಲ್ಲಿ ದರೋಡೆಕೋರರು ಬಂದು ಆತನ ಮೊಬೈಲ್ ಕಸಿದುಕೊಳ್ಳಲ್ಪಟ್ಟಿದ್ದರೂ ಬಳಿಕ ಮರಳಿ ನೀಡಲಾಗಿದೆ ಎಂದರು.
ದರೋಡೆಕೋರರು ಬಳಸಿದ ಇಕೋ ವಾಹನ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಪತ್ತೆಯಾಗಿದೆ. ಅದರಲ್ಲಿ ಸ್ವಲ್ಪ ನಗದು ಹಾಗೂ ಚಿನ್ನಾಭರಣ ಪ್ಯಾಕೆಟ್‌ಗಳು ದೊರೆತಿವೆ.ಘಟನೆ ಕುರಿತು 8 ತನಿಖಾ ತಂಡಗಳನ್ನು ರಚಿಸಲಾಗಿದೆ ಮತ್ತು ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಪೊಲೀಸರು ಜಾಲ ಬಿಸಿದ್ದು ಶೀಘ್ರದಲ್ಲೇ ಆರೋಪಿಗಳ ಪತ್ತೆ ಮಾಡಲಾಗುವದು ಸಾರ್ವಜನಿಕರು ಗಾಬರಿಯಾಗಬಾರದು ಎಂದು ವಿಜಯಪುರ ಎಸ್‌ಪಿ ಲಕ್ಷಣ ನಿಂಬರಗಿ ಯವರು ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಭರವಸೆ ನೀಡಿದ್ದಾರೆ.
ಸದ್ಯ ತನಿಖೆ ಮುಂದುವರಿದಿದ್ದು, ಕಳ್ಳತನವಾದ ನಗದು ಎಷ್ಟು? ಕೃತ್ಯ ಹೇಗಾಯಿತು? ಎಂಬಿತ್ಯಾದಿ ವಿವರ ತನಿಖೆ ಬಳಿಕವೇ ಗೊತ್ತಾಗಲಿದೆ ಯಾರು ಮಾಧ್ಯಮದವರು ಅನಾವಶ್ಯಕ ಬಿಂಬಿಸಿ ವರದಿ ಅಥವಾ ವಿಡಿಯೋ ಹರಿಬಿಡಬಾರದು ಎಂದರು.
ಎಸ್.ಬಿ.ಆಯ್.ಗ್ರಾಹಕರ ಪರಿಸ್ಥಿತಿ ಮತ್ತು ಪರದಾಟ:
ಘಟನೆಯ ಬಳಿಕ ಬ್ಯಾಂಕ್ ಮುಂದೇನು ನಡೆಯುತ್ತದೆ ಎಂಬುದರ ಬಗ್ಗೆ ಆತಂಕಗೊಂಡ ಗ್ರಾಹಕರು, ಠೇವಣಿದಾರರು, ಚಿನ್ನಾಭರಣ ಒತ್ತೆಯಿಟ್ಟು ಹಣಪಡೆದವರು ಹಾಗೂ ಲಾಕರ್ ಹೊಂದಿದವರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ತಮ್ಮ ಚಿನ್ನಾಭರಣ ಸುರಕ್ಷಿತವಿದೆಯೇ ಎಂದು ವಿಚಾರಿಸುತ್ತಿದ್ದರು. ಆದರೆ ಪೋಲೀಸರ ಬಿಗಿ ಬಂದೋಬಸ್ತದಿಂದಾಗಿ ಬ್ಯಾಂಕ್ ಅಧಿಕಾರಿಗಳನ್ನು ಭೇಟಿಮಾಡಲು, ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡದೆ ಮೌನ ವಹಿಸಿದರು. ಇದರಿಂದ ಗ್ರಾಹಕರಲ್ಲಿ ಅಸಮಾಧಾನ ವ್ಯಕ್ತವಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 