ಬಾಗಲಕೋಟೆ: ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕರ ಅಧಿಕಾರಿಗಳ ನೇತೃತ್ವದಲ್ಲಿ ಶಾಲೆಯನ್ನು ಬಿಟ್ಟ 8 ಮಕ್ಕಳನ್ನು ಗುರುವಾರ ಮರಳಿ ಶಾಲೆಗೆ ಸೇರಿಸಲಾಯಿತು.
ಮಕ್ಕಳು ಶಿಕ್ಷಣದಿಂದ ವಂಚಿತರಾಗದೇ ಮತ್ತೆ ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ಬರಬೇಕೆಂಬ ಆಶಯದಿಂದ ಜಿ.ಪಂ ನೇತೃತದಲ್ಲಿ ಬಾಗಲಕೋಟೆ ಸಮೀಪದ ವೀರಾಪೂರ (ಪು.ಕೆ) ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ ಕಲಿತು ಕಳೆದ 2 ವರ್ಷಗಳಿಂದ ಶಾಲೆಯಿಂದ 7 ವಿದ್ಯಾಥರ್ಿಗಳು ಹೊರಗುಳಿದಿದ್ದರು.
ಇದನ್ನು ತಿಳಿದ ಜಿ.ಪಂ ಸಿಇಓ ಅವರು ವಿದ್ಯಾಥರ್ಿಗಳ ಮನೆಗೆ ತೆರಳಿ ಪಾಲಕರು ಹಾಗೂ ವಿದ್ಯಾಥರ್ಿಗಳ ಮನ ಒಲಿಸಿ ಸಮೀಪದ ಸರಕಾರಿ ಪ್ರೌಢಶಾಲೆ ಸೀಮಿಕೇರಿಗೆ ದಾಖಲಿಸಲಾಯಿತು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ದಾಖಲಿಸುವ ಸಲುವಾಗಿ ಜಿಲ್ಲೆಯಾದ್ಯಂತ ಆಂದೋಲ ಕೈಗೊಂಡಿದ್ದು, ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ದಾಖಲಿಸಿ ಶಿಕ್ಷಣಾಬ್ಯಾಸ ಮುಂದುವರಿಸಲಾಗುತ್ತಿದೆ.
ಇದಕ್ಕಾಗಿ ಪಾಲಕ, ಪೋಷಕರ ಒತ್ತಾಸೆಯಾಗಿ ನಿಲ್ಲಬೇಕೆಂದು ಗಂಗೂಬಾಯಿ ಮಾನಕರ ಕೋರಿದರು. ಗದ್ದನಕೇರಿ, ವೀರಾಪೂರ, ಸೀಮಿಕೇರಿ ಮೊದಲಾದ ಗ್ರಾಮಗಳಲ್ಲಿ ಸಂಚಿಸಿ ಶಾಲೆ ಬಿಟ್ಟ ಒಟ್ಟು ಎಂಟು ಮಕ್ಕಳನ್ನು ಮರಳಿ ಶಾಲೆಗೆ ಕರೆತಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಬಿ.ಎಚ್.ಗೋನಾಳ, ಬಿಇಓ ದೊಡ್ಡಬಸಪ್ಪ ನೀರಲಕೇರಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಅಡಿವೆಪ್ಪ ಗೊಳಸಂಗಿ ಸೇರಿದಂತೆ ಮುಖ್ಯುಗುರುಗಳು ಹಾಜರಿದ್ದು, ಪಾಲಕರ ಮನ ಒಲಿಸಿ ಶಾಲೆಗೆ ದಾಖಲಿಸಲು ನೆರವಾದರು