ಹಠಾತ್ ಹೊಂಚುದಾಳಿ: 8 ಮಾಲಿಯನ್ ಸೈನಿಕರ ಹತ್ಯೆ

ಮಾಸ್ಕೋ, ಫೆಬ್ರವರಿ 15, ಮಾಲಿಯನ್ ಸಶಸ್ತ್ರ ಪಡೆಗಳ ಮೇಲೆ  ಈಶಾನ್ಯ ಭಾಗದಲ್ಲಿ ಬಂಡುಕೋರರ ತಂಡ ನಡೆಸಿದ  ಹಠಾತ್ ಸಂಚಿನ ದಾಳಿಗೆ  8 ಮಂದಿ ಸೈನಿಕರು ಹತರಾಗಿದ್ದಾರೆ ಎಂದು ರಾಷ್ಟ್ರೀಯ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.ಗಾವೊ ಪ್ರದೇಶದಲ್ಲಿ ಶುಕ್ರವಾರ ನಡೆದ ಈ ಘಟನೆಯಲ್ಲಿ ಇನ್ನೂ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.ಘರ್ಷಣೆಯ ಪರಿಣಾಮವಾಗಿ ಸೇನಾ  ಘಟಕವು ಕೆಲವು ವಾಹನಗಳು ಮತ್ತು ಉಪಕರಣಗಳನ್ನು ಸಹ ಕಳೆದುಕೊಂಡಿದೆ ಎಂದೂ ಹೇಳಲಾಗಿದೆ. ಮತ್ತೊಂದು ಘಟನೆ  ಮೊಪ್ತಿಯಲ್ಲಿ ನಡೆದಿದ್ದು, ಓರ್ವಯೋಧ ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದಾರೆ.2012 ರಲ್ಲಿ ಟುವಾರೆಗ್ ಉಗ್ರರು ದೇಶದ ಉತ್ತರ ಭಾಗದಲ್ಲಿನ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ  ಪರಿಸ್ಥಿತಿ ಅಸ್ಥಿರವಾಯಿತು. ಇಸ್ಲಾಮಿಸ್ಟ್ಗಳ ಚಟುವಟಿಕೆಗಳು, ಮಾಜಿ ಲಿಬಿಯಾದ ನಾಯಕ ಮುಅಮ್ಮರ್ ಗಡಾಫಿಗೆ ನಿಷ್ಠರಾಗಿರುವ ಶಕ್ತಿಗಳು ಮತ್ತು ಫ್ರೆಂಚ್ ಹಸ್ತಕ್ಷೇಪದ ಮೇಲೆ ಸಂಘರ್ಷ ಇನ್ನಷ್ಟು ಹೆಚ್ಚಾಗಿದೆ .