ಕ್ವೆಟ್ಟಾ, ಫೆಬ್ರವರಿ 18, ಪಾಕಿಸ್ತಾನದ ನಗರ ಶಹರಾ-ಇ-ಇಕ್ಬಾಲ್ ರಸ್ತೆಯ ಮಸೀದಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಪೊಲೀಸರು ಸೇರಿದಂತೆ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, ಮತ್ತು 23 ಮಂದಿ ಗಾಯಗೊಂಡಿದ್ದಾರೆ.ಸೋಮವಾರ ಸಂಜೆ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ಪೊಲೀಸರು ಮತ್ತು ಪರಿಹಾರ ಸಿಬ್ಬಂದಿ ಸ್ಥಳಕ್ಕೆ ತಲುಪಿ ಮೃತರ ಶವಗಳನ್ನು ಹಾಗೂ ಗಾಯಗೊಂಡ ಜನರನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲು ಪ್ರಾರಂಭಿಸಿದರು ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.ಸ್ಫೋಟದ ಸ್ವರೂಪ ತಕ್ಷಣ ಸ್ಪಷ್ಟವಾಗಿಲ್ಲ. ಭದ್ರತಾ ಅಧಿಕಾರಿಗಳು, ಸಿಬ್ಬಂದಿ ಸ್ಫೋಟದ ಸ್ಥಳವನ್ನು ಸುತ್ತುವರೆದಿದ್ದಾರೆ.ಜನನಿಬಿಡ ಪ್ರದೇಶದಲ್ಲಿ ನೆಲೆಗೊಂಡಿರುವ ಮಸೀದಿಯ ಮೇಲೆ ದಾಳಿ ನಡೆದ ಸಮಯದಲ್ಲಿ ಸುಮಾರು 60 ಜನರು ಹಾಜರಿದ್ದರು ಎಂದೂ ಸಂಜೆ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಫಿಡಾ ಮೊಹಮ್ಮದ್ ಹೇಳಿದರು.ಪ್ರಾರ್ಥನೆ ಪ್ರಾರಂಭವಾದ ಕೆಲವೇ ಸೆಕೆಂಡುಗಳಲ್ಲಿ ಮುಂದಿನ ಸಾಲಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಅವರು ಹೇಳಿದರು. ಇದು ಪ್ರಬಲವಾದ ಬಾಂಬ್ ಸ್ಫೋಟವಾಗಿದ್ದು, ಜನರು ಭಯದಿಂದ ಕೂಗಿಕೊಂಡು , ಬೇರೆ ಕಡೆಗೆ ಓಡುತ್ತಿದ್ದರು ಎಂದೂ ಅವರು ಹೇಳಿದರು.