ಕೆ.ಪಿ.ಮಗೆಣ್ಣವರ ಲಕ್ಷ್ಮೀ ಸೌಹಾರ್ದ ಸಂಸ್ಥೆಗೆ 8.75 ಕೋಟಿ ನಿವ್ವಳ ಲಾಭ

8.75 crore net profit for KP Magennavar's Lakshmi Souharda organization

ಮಾಂಜರಿ 13: ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರಾರಂಭಿಸಿದ ಕೆ.ಪಿ.ಮಗೆಣ್ಣವರ ಲಕ್ಷ್ಮೀ ಸೌಹಾರ್ದ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 8.75 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಸಂಸ್ಥಾಪಕ ಅಧ್ಯಕ್ಷ, ಹಾಗೂ ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆಣ್ಣವರ ತಿಳಿಸಿದರು. 

ಅವರು ಇಂದು  ಮಾಂಜರಿ ಗ್ರಾಮದ ಮುಖ್ಯ ಕಚೇರಿಯಲ್ಲಿ ಏರಿ​‍್ಡಸಸಿದ ಸನ್ಮಾನ ಸಮಾರಂಭ ಹಾಗೂ ಪ್ರಸಕ್ತ ವರ್ಷದ 2024-25ನೇ ಸಾಲಿನ ಸಹಕಾರಿಯ ಲೆಕ್ಕ ಪತ್ರ ಮುಕ್ತಾಯ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅವರು 

ಕೆ.ಪಿ.ಮಗೆಣ್ಣವರ ಲಕ್ಷ್ಮೀ ಸೌಹಾರ್ದ ಸಂಸ್ಥೆಯು 8.75 ಕೋಟಿ ರೂ ನಿವ್ವಳ ಲಾಭ ಗಳಿಸಿದೆ.ಕಾಗವಾಡ ಶಾಖೆ 1.13 ಕೋಟಿ ರೂ ಲಾಭಾಂಶ ಗಳಿಸಿ ಮೊದಲನೇ ಸ್ಥಾನದಲ್ಲಿದೆ ಎಂದರು. ಕೆ.ಪಿ.ಮಗೆಣ್ಣವರಲಕ್ಷ್ಮೀ ಸೌಹಾರ್ದ ಸಂಸ್ಥೆಯು 29 ಶಾಖೆಗಳನ್ನು ಹೊಂದಿದ್ದು, ಇದರಲ್ಲಿ ಪ್ರಸಕ್ತ ಸಾಲಿನಲ್ಲಿ ಕಾಗವಾಡ ಶಾಖೆಯು ಮೊದಲನೇ ಸ್ಥಾನದಲ್ಲಿದೆ. ಅದಕ್ಕಾಗಿ ಸಲಹಾ ಸಮೀತಿಯ ಅಧ್ಯಕ್ಷ ಖ್ಯಾತ ನ್ಯಾಯವಾದಿಗಳಾದ ಟಿ.ಕೆ.ಧೋತ್ರೆ ಹಾಗೂ ಮ್ಯಾನೇಜರ್ ರಾಘವೇಂದ್ರ ಕುಲಕರ್ಣಿ ಅವರನ್ನು ಬ್ಯಾಂಕಿನ ಅಧ್ಯಕ್ಷ ಸತೀಶ ಮಗೆಣ್ಣವರ ಅವರು ಸನ್ಮಾನಿಸಿ ಗೌರವಿಸಿದರು. ಎರಡನೇ ಸ್ಥಾನದಲ್ಲಿ ಹಾರೂಗೇರಿ ಶಾಖೆ ಹಾಗೂ ಮುರನೇ ಸ್ಥಾನವದಲ್ಲಿ ಮಾಂಜರಿ ಶಾಖೆ ಸ್ಥಾನದಲ್ಲಿದೆ. ಈ ಮುರು ಶಾಖೆಗಳ ಸಲಹಾ ಸಮೀತಿಯ ಅಧ್ಯಕ್ಷರು ಹಾಗೂ ಮ್ಯಾಜೇಂಜರ ಅವರನ್ನು ಸನ್ಮಾನಿಸಿದರು. 

ಈ ವೇಳೆ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಪ್ರದೀಪ ಮಗೆಣ್ಣವರ ಮಾತನಾಡಿ ಮಾರ್ಚ 2025ರ ವರೆಗೆ ಸಂಸ್ಥೆಯು 11.584 ಸದಸ್ಯರನ್ನು ಹೊಂದಿದ್ದು, 87.17 ಲಕ್ಷ ರೂ ಶೇರ ಬಂಡವಾಳವಿದೆ.334.24 ಕೋಟಿ ಠೇವಣಿ ಸಂಗ್ರಹಿಸಿದ್ದು, 177.61 ಕೋಟಿ ರೂ ಸಾಲ ವಿತರಿಸಲಾಗಿದೆ ಎಂದರು. 374 ಕೋಟಿ ರೂ ದುಡಿಯುವ ಬಂಡವಾಳವಿದೆ ಎಂದರು. 29 ಶಾಖೆಗಳು ಇದ್ದು, ಸಾಲ ವಸೂಲಾತಿ ಶೇ.97 ರಷ್ಟು ಆಗಿದೆ. ಹಾಗೂ 9 ಶಾಖೆಗಳು ಪ್ರತಿಶತ 100 ರಷ್ಟು ಸಾಲ ವಸೂಲಾತಿ ಮಾಡಿದೆ. ಹಾಗೂ 29 ಶಾಖೆಗಳ ಸಲಹಾ ಸಮೀತಿಯ ಅಧ್ಯಕ್ಷರ ರನ್ನು ಈ ವೇಳೆ ಸನ್ಮಾನಿಸಲಾಯಿತು ಎಂದು ಪ್ರದೀಪ ಮಗೆಣ್ಣವರ ತಿಳಿಸಿದರು.  

ಈ ವೇಳೆ ಬ್ಯಾಂಕಿನ ಅಧ್ಯಕ್ಷ ಸತೀಶ ಮಗೆಣ್ಣವರ, ಉಪಾಧ್ಯಕ್ಷ ಸದಾಶಿವ ಮಿರಜಿ, ನಿರ್ದೆಶಕರಾದ ತಾತ್ಯಾಸಾಹೇಬ ಶೇಡಬಾಳೆ ಅಶೋಕ ಚಿಮಾಯಿ, ಭೀಮು ಭೋಲೆ, ನೇಮಿನಾಥ ಪಟ್ಟಣಕುಡೆ. ಸಾಗರ ಮಂಗಸೂಳಿ, ಮ್ಯಾನೇಜರ ಕಿರಣ ಮೋನೆ, ಚಂದ್ರಕಾಂತ ಪಾಟೀಲ, ರಾಜು ದೊಡ್ಡಣ್ಣವರ, ರಾಹುಲ ಶಹಾ, ಎ.ಜಿ.ಹಳ್ಳಿ, ಅಶೋಕ ಹುಗ್ಗಿ ಸೇರಿದಂತೆ ಅನೇಕರು ಇದ್ದರು.