ಬೆಂಗಳೂರು, ಮಾರ್ಚ್ 7,ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 8.3 ಕೋಟಿ ರೂ.ಗಳ ಮೌಲ್ಯದ 1.3 ಕೆಜಿ ಮಾದಕವಸ್ತು (ಕೊಕೇನ್) ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಗ್ವಾಟೆಮಾಲಾದ ಓರ್ವ ಮಹಿಳಾ ಪ್ರಯಾಣಿಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಂಕ ಅಧಿಕಾರಿಗಳು ಬಂಧಿಸಿದ್ದಾರೆ.ಶುಕ್ರವಾರ ರಾತ್ರಿ ಇಲ್ಲಿ ಬಿಡುಗಡೆ ಮಾಡಿದ ಮಾಹಿತಿಯಂತೆ ಮಂಗಳವಾರ ರಾತ್ರಿ ಮಹಿಳೆ ಗ್ವಾಟೆಮಾಲನ್ನಿಂದ ಇಥಿಯೋಪಿಯನ್ ಏರ್ಲೈನ್ಸ್ ವಿಮಾನದ ಮೂಲಕ ಆಗಮಿಸಿದ್ದು, 1.3 ಕೆಜಿ ಕೊಕೇನ್ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಳೆ. ನಿಷೇಧಿತ ಮಾದಕ ವಸ್ತುವನ್ನು 150 ಮಾತ್ರೆಗಳಲ್ಲಿ(ಕ್ಯಾಪ್ಸೂಲ್ಸ್) ತುಂಬಿಸಿ ದೇಹದಲ್ಲಿ ಇಟ್ಟಿದ್ದ ಟ್ಯೂಬ್ ನೊಳಗೆ ಮಾತ್ರೆಗಳನ್ನು ನುಂಗಿ ಕಳ್ಳಸಾಗಣೆ ಮಾಡಲು ಯತ್ನಿಸಿದ್ದಾಳೆ. .ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಾಣಿಕೆಯ ಮಹಿಳೆಯಿಂದ ಇಷ್ಟೊಂದು ದೊಡ್ಡ ಪ್ರಮಾಣದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.