79ನೇ ಸ್ವತಂತ್ರೋತ್ಸವ ಅತ್ಯಂತ ಸಂಭ್ರಮದಿಂದ ಆಚರಣೆ: ಶಾಸಕ ಅಶೋಕ ಮನಗೂಳಿ

79ನೇ ಸ್ವತಂತ್ರೋತ್ಸವ ಅತ್ಯಂತ ಸಂಭ್ರಮದಿಂದ ಆಚರಣೆ: ಶಾಸಕ ಅಶೋಕ ಮನಗೂಳಿ  79th Independence Day celebrated with great enthusiasm: MLA Ashok Managuli

ಸಿಂದಗಿ 16: ಸುದೀರ್ಘವಾದ 79ವರ್ಷದ ಪಯಣದಲ್ಲಿ ಈ ಬಾರತ ಮಾತೆಯನ್ನು ಅತ್ಯಂತ ಪ್ರಗತಿಯತ್ತ ಕೊಂಡೋಯ್ಯಬೇಕು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಜಗತ್ತಿನಲ್ಲಿ  ಅತ್ಯಂತ ಮುನ್ನಡೆ ಸಾಗಿಸಬೇಕು ಎಂದು ನಮ್ಮ ಮಹನೀಯರ  ತ್ಯಾಗ-ಬಲಿದಾನ, ಹೋರಾಟದ ಪ್ರತೀಕವಾಗಿ ಇಂದು 79ನೇ ಸ್ವತಂತ್ರೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ  ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. 

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತ ಹಮ್ಮಿಕೊಂಡ 79 ನೇ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ಸುಧೀರ್ಘವಾದ 200 ವರ್ಷಗಳ ಐತಿಹಾಸಿ ಹೋರಾಟದ ಫಲವಾಗಿ ಈ ಭಾರತದೇಶಕ್ಕೆ 1947 ಅಗಷ್ಟ 15 ರಂದು ನಮಗೆ ಸ್ವತಂತ್ರ ಸಿಕ್ಕಿತು. ಸ್ವತಂತ್ರ ಪೂರ್ವದಲ್ಲಿ ಈ ದೇಶದ ಸ್ವತಂತ್ರಕ್ಕಾಗಿ ಲಕ್ಷಾನುಗಟ್ಟಲೆ ಯೋಧರು, ನಮ್ಮ ರಾಷ್ಟ್ರೀಯ ನಾಯಕರುಗಳು ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದು ಕೇವಲ ಮಾತುಕತೆಯಿಂದ ಅಲ್ಲ ಹೋರಾಟ, ಸತ್ಯಾಗ್ರಹ, ಕ್ರಾಂತಿಗಳ ಮೂಲಕ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ  ತಿರಂಗ ಹಾರಾಡುತ್ತಿದೆ. ಇದಕ್ಕೆ ಇದಕ್ಕೆ ಪೂರಕವಾಗಿ ನಮ್ಮ ದೇಶಕ್ಕೆ 1948ರಲ್ಲಿ ಡಾ ಬಾಬಾಸಾಹೇಬ ಅಂಬೇಡ್ಕರ ಅವರು ರಚಿಸಿದ ಸಂವಿದಾನದ ಅಡಿಯಲ್ಲಿ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ವ್ಯವಸ್ಥೆಯನ್ನು ತರುವ ಮೂಲಕ ಈ ದೇಶದಲ್ಲಿ ಸಾಮಾಜಿಕ ನ್ಯಾಯದಡಿಯಲ್ಲಿ ಒಬ್ಬ ಕಟ್ಟಕಡೆಯ ವ್ಯಕ್ತಿಗೂ ಸರಕಾರಿ ಸೌಲಭ್ಯ ಸಿಗಬೇಕು ಎಲ್ಲರೂ ಪ್ರಗತಿ ಹೊಂದಬೇಕು ಅತ್ಯಂತ ಅಭಿಮಾನದಿಂದ ಸ್ವಾತಂತ್ರೊತ್ಸವವನ್ನು ಗೌರವದಿಂದ  ಆಚರಿಸುತ್ತೆವೆ. ಗಡಿಯಲ್ಲಿ ಅತೀ ಹೆಚ್ಚು ಯೋಧರನ್ನು ಹೊಂದಿದ ನಮ್ಮ ಭಾರತದೇಶವಾಗಿದೆ ಅಲ್ಲದೆ ಆರ್ಥಿಕತೆಯಲ್ಲಿ ಎಲ್ಲ ದೇಶಗಳಿಗಿಂತ 4ನೇ ಸ್ಥಾನದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ ಎಂದು ಹೇಳಿದ ಅವರು 1999ರಲ್ಲಿ ಈ ಕ್ಷೇತ್ರಕ್ಕೆ ದಿ.ಎಂ.ಸಿ.ಮನಗೂಳಿ ಅವರು ಸಂಪೂರ್ಣ ನೀರಾವರಿ ಮಾಡಿದ್ದರಿಂದ ಇಂದು 144 ಹಳ್ಳಿಗಳು ನೀರಾವರಿಗೆ ಒಳಪಟ್ಟಿವೆ. ಅದಕ್ಕೆ ಹಗಲು ಹೊತ್ತಿನಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಕಾಂಗ್ರೆಸ್ ಸರಕಾರ 5 ಗ್ಯಾರೆಂಟಿಗಳನ್ನು ಸಮರ್ಥವಾಗಿ ಪೂರೈಸುವುದರ ಜೊತೆಗೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಬಿಡುಗಡೆಗೊಳಿಸುತ್ತಿದೆ. ಈ ಕ್ಷೇತ್ರದ 140 ಸರಕಾರಿ ಶಾಲೆಗಳಿಗೆ ಎಂ.ಸಿ.ಮನಗೂಳಿ ಪ್ರತಿಷ್ಠಾನದವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಪ್ರಥಮ ಹಂತದಲ್ಲಿ ಶಿಕ್ಷಣ ಸಚಿವ ಮಧು ಬಂಗಾರೇಪ್ಪನವರಿಂದ 50 ಘಟಕಗಳನ್ನು ಪ್ರಾರಂಭಿಸಲಾಗುವುದು ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಸಾವಿರಾರು ಕೋಟಿ ಅನುದಾನ ತಂದು ಅತ್ಯಂತ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.  

ಪುರಸಭೆ ಅದ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿದರು. 

ಈ ಸಂಧರ್ಭದಲ್ಲಿ ಪುರಸಭೆವತಿಯಿಂದ ಪಟ್ಟಣದ ವಿವಿಧ ರಸ್ತೆಗಳಿಗೆ ಸಾಧಕರ ನಾಮಫಲಕಗಳನ್ನು ಆನಾವರಣಗೊಳಿಸಲಾಯಿತು. ಅಲ್ಲದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪವಿತ್ರಾ ದೇವರಮನಿ, ಶೃಷ್ಠಿ ರೋಟ್ಟಿ, ಸ್ನೇಹಾ ಬಂಡೆ, ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಶ್ರೀಶೈಲ ಹಟ್ಟಿ, ನಬ್ರತಾ ಶೇರಖಾನೆ, ಉಷಾ ಶಿವಶಿಂಪಗೇರ ಹಾಗೂ ರಾಜ್ಯಮಟ್ಟದ ಕ್ರಿಕೇಟ ಪಂಧ್ಯದಲ್ಲಿ ಬಾಗವಹಿಸಿದ ಜಯಶ್ರೀ ಕೂಚಬಾಳ, ಕಬ್ಬಡ್ಡಿಯಲ್ಲಿ ಪ್ರಮೋದ ಮಾಣಸೂಣಗಿ ಅವರನ್ನು ಸನ್ಮಾನಿಸಿ ಗೌರವಿಸಿದರು. 

ಕಾರ್ಯಕ್ರಮದಲ್ಲಿ ಪೊಲೀಸ ಇಲಾಖೆ, ಅಗ್ನಿಶಾಮಕ, ಅಬಕಾರಿ ಸಿಬ್ಬಂದಿ ಹಾಗೂ ಎನ್‌ಎಸ್‌ಎಸ್, ಸ್ಕೌಟ್ಸ ಮತ್ತು ಗೈಡ್ಸ್‌, ಕೆಜಿಎಂಪಿಎಸ್,ಎಚ್‌.ಜಿ.ಕನ್ಯಾ ಪ್ರೌಡಶಾಲೆ,  ಜ್ಞಾನಭಾರತಿ ವಿದ್ಯಾಮಂದಿರ, ಆದರ್ಶ ವಿದ್ಯಾಲಯ,ಲೋಯಲಾ ಸ್ಕೂಲ,  ಭೀಮಾ ಯುನಿರ್ವಸೆಲ್ ಸ್ಕೂಲ್‌ನ ವಿದ್ಯಾರ್ಥಿಗಳಿಂದ ಪಥಸಂಚಲನ ಹಾಗೂ ಕವಾಯತ ಮತ್ತು ಆದರ್ಶ ವಿದ್ಯಾಲಯದ 80 ವಿದ್ಯಾರ್ಥಿಗಳಿಂದ ರಾಜ್ಯದ ವಿವಿಧ ರಾಜ್ಯಗಳ ಸಂಸ್ಕೃತಿಯ ಸೊಗಡು ಬಿಂಭಿಸುವ ನೃತ್ಯ ಜನಮನ ಸೂರುಗೊಂಡಿತು.  

ಕಾರ್ಯಕ್ರಮಕ್ಕೂ ಮುನ್ನ ಶಾಸಕ ಅಶೋಕ ಮನಗೂಳಿ ಹಾಗೂ ಅಧಿಕಾರಿಗಳು ತೆರೆದ ವಾಹನದಲ್ಲಿ ಧ್ವಜವಂಧನೆ ಸಲ್ಲಿಸಿದರು. 

ಸಿಪಿಆಯ್ ನಾನಾಗೌಡ ಪೊಲೀಸಪಾಟೀಲ, ತಾಪಂ ಇಓ ರಾಮು ಅಗ್ನಿ, ಕರ್ನಾಟಕ ರಾಜ್ಯ ನೌಕರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ, ಪುರಸಭೆ ಮುಖ್ಯಾಧಿಕಾರಿ ಎಸ್‌.ರಾಜಶೇಖರ, ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ನಾಯ್ಕೋಡಿ ವೇದಿಕೆ ಮೇಲಿದ್ದರು. 

ಬಿಇಓ  ಮಹಾಂತೇಶ ಯಡ್ರಾಮಿ ಸ್ವಾಗತಿಸಿದರು. ತಹಶೀಲ್ದಾರ ಕರೇಪ್ಪ ಬೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಆರಿ​‍್ಪ ಎಂ.ಆರ್‌.ಡೋಣಿ, ದೈಹಿಕ ನಿರ್ದೇಶಕ ರವಿ ಗೋಲಾ ನಿರೂಪಿಸಿದರು. ತಾಪಂ ಇಓ ರಾಮು ಅಗ್ನಿ ವಂದಿಸಿದರು.