ಸತ್ತಿಗೇರಿ ಗ್ರಾಮದಲ್ಲಿ ಸಂಭ್ರಮದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ
79th Independence Day celebrated with fervour in Sattigeri village
ಯರಗಟ್ಟಿ, 15 ; ಸಮೀಪದ ಸತ್ತಿಗೇರಿ ಗ್ರಾಮದಲ್ಲಿ 79 ನೆ ಸ್ವಾತಂತ್ರೋತ್ಸವ ದಿನಾಚರಣೆಯ ಪ್ರಯುಕ್ತ ಸ್ಥಳೀಯ ಮಳಿಮಲ್ಲೇಶ್ವರ ಶ್ರೀಮಠದ ಹತ್ತಿರ ಸಾರ್ವಜನಿಕ ದ್ವಜಾರೋಹಣ ನೇರವೆರಿಸಿಅದರಂತೆ ಗ್ರಾ. ಪಂ. ಉಪಾಧ್ಯಕ್ಷ ಗುರು ವಾಲಿ ಅವರು ಮಹಾತ್ಮ ಗಾಂದೀಜಿ ಹಾಗೂ ಡಾ.ಬಿ,ಆರ್, ಅಂಬೇಡ್ಕರ ಭಾವ ಚಿತ್ರಕ್ಕೆ ಮಾಲಾರೆ್ಣ ಮಾಡಿ ದ್ವಜಾರೋಹಣ ನೇರವೆರಿಸಿದರು.
ನಂತರ ಶಾಲಾ ಮಕ್ಕಳು ಸ್ವಾತಂತ್ರೋತ್ಸವ ದಿನಾಚರಣೆ ಮತ್ತು ಅದರ ಹೊರಾಟಗಾರರ ಬಗ್ಗೆ ಪಾಲಕರ ಹುಬ್ಬೇರುವಂತೆ ಭಾಷಣ ಮಾಡಿದರು, ಅದರ ಜೊತೆಯಲ್ಲಿ ವಿದ್ಯಾರ್ಥಿಗಳು ದೇಶ ಭಕ್ತಿಯ ಹಾಡುಗಳಿಗೆ ನೃತ್ಯ ಮಾಡಿ ಮನರಂಜಿಸುವದರ ಜೊತೆಯಲ್ಲಿ ದೇಶ ಭಕ್ತಿಯನ್ನು ತೊರಿಸಿದರು.
ಮಳಿಮಲ್ಲೇಶ್ವರ ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಗೋಡಿ ಮಾತನಾಡಿದ ಅವರು ಇಂದು ನಮ್ಮ ದೇಶವು ಸ್ವಾತಂತ್ರೋತ್ಸವ 79 ವರ್ಷಗಳನ್ನು ಪೂರೈಸುತ್ತಿರುವ ಪವಿತ್ರ ಕ್ಷಣ. 1947ರ ಆಗಸ್ಟ್ 15ರಂದು ಪ್ರಾರಂಭವಾದ ಸ್ವಾತಂತ್ರೋತ್ಸವದ ದೀಪ, ಕೋಟ್ಯಂತರ ಜನರ ತ್ಯಾಗ, ತಪಸ್ಸು, ಹೋರಾಟ ಮತ್ತು ಬಲಿದಾನದ ಫಲ.ದೇಶದ ಸ್ವಾತಂತ್ರೋತ್ಸವ ಹೋರಾಟದಲ್ಲಿ ಮಣಿದ ವೀರರು, ವೀರ ವನಿತೆಯರು, ಸೈನಿಕರು ಇನ್ನಿತರ ಮಹಾನ್ ನಾಯಕರು ಎಂದೆಂದಿಗೂ ನಮಗೆ ಪ್ರೇರಣೆ. ಅವರ ನಿಷ್ಠೆ, ದೇಶಭಕ್ತಿ ಮತ್ತು ದೇಶಪ್ರೇಮ, ತ್ಯಾಗ ಮತ್ತು ಬಲಿದಾನ ನಮಗೆ ಸ್ಫೂರ್ತಿದಾಯಕ.ನಮ್ಮ ದೇಶದ ಏಕತೆ, ಅಖಂಡತೆ, ಪ್ರಗತಿ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವುದರ ಜೊತೆಗೆ ನವಭಾರತ ನಿರ್ಮಾಣದ ಪ್ರತಿಜ್ಞೆ ಮಾಡೋಣ. ರಾಷ್ಟ್ರವನ್ನು ಸಮೃದ್ಧಗೊಳಿಸುವುದರ ಕಡೆಗೆ ಹೆಜ್ಜೆ ಹಾಕೋಣ. ವೇದಿಕೆಯ ಮೇಲೆ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಪಿಡಿಓ ಎ. ಬಿ. ಬಂಗಾರಿ, ವಿರುಪಾಕ್ಷ ಪಾಟೀಲ, ಈರಣ್ಣಾ ಹೊಸಮನಿ, ಉಮೇಶ ಮಾಗುಂಡನವರ, ಗುರ್ಪ ಶೆಟ್ಟರ, ಗುರುಪಾದ ಗೋಡಿ, ಷಣ್ಮುಖ ಬಳಿಗಾರ, ಬಸವರಾಜ ಮುನ್ಯಾಳ, ಇಬ್ರಾಹಿಂಸಾಬ ಮುಲ್ಲಾ, ದುರ್ಗಪ್ಪ ಬಂಡಿವಡ್ಡರ, ಲಕ್ಷ್ಮಪ್ಪ ಹೆಗಡಿ, ಶ್ರೀಶೈಲ ಸವದತ್ತಿ, ಗುರುಪಾದ ಪಾಟೀಲ, ಈರಣ್ಣಾ ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 