ಬೆಳಗಾವಿಯಲ್ಲಿ 78ನೇ ಚಾರ್ಟರ್ಡ್‌ ಅಕೌಂಟೆಂಟ್ಸ್‌ ದಿನಾಚರಣೆ

ಬೆಳಗಾವಿಯಲ್ಲಿ 78ನೇ ಚಾರ್ಟರ್ಡ್‌ ಅಕೌಂಟೆಂಟ್ಸ್‌ ದಿನಾಚರಣೆ 78th Chartered Accountants Day celebrated in Belgaum

ಬೆಳಗಾವಿ 1: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ  ಸಂಸ್ಥೆಯ ಸೌತ್ ಇಂಡಿಯನ್ ರೀಜನಲ್ ಕೌನ್ಸಿಲ್  ಅಡಿಯಲ್ಲಿ ಕಾರ್ಯನಿರ್ವಹಿಸುವ ಬೆಳಗಾವಿ ಶಾಖೆಯು 2026ರ ಜುಲೈ 1ರಂದು ಬೆಳಗಾವಿಯ ಟಿಳಕವಾಡಿಯ ಸ್ವರೂಪ್ ಪ್ಲಾಜಾದಲ್ಲಿರುವ ಋಂಋ ಭವನದಲ್ಲಿ 78ನೇ ಚಾರ್ಟರ್ಡ್‌ ಅಕೌಂಟೆಂಟ್ಸ್‌ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿತು.  

ಕಾರ್ಯಕ್ರಮವು ಬೆಳಗ್ಗೆ 9:00 ಗಂಟೆಗೆ ಶಾಖೆಯ ಅಧ್ಯಕ್ಷರಾದ ಸಿಎ ಸಂಜೀವ್ ಆರ್‌. ದೇಶಪಾಂಡೆ ಅವರು ಸಂಸ್ಥೆಯ ಧ್ವಜಾರೋಹಣ ನೆರವೇರಿಸುವ ಮೂಲಕ ಆರಂಭವಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂಸದ ಶ್ರೀ ಜಗದೀಶ್ ಶೆಟ್ಟರ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.  

ಮುಖ್ಯ ಅತಿಥಿ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಚಾರ್ಟರ್ಡ್‌ ಅಕೌಂಟೆಂಟ್ಸ್‌ ರಾಷ್ಟ್ರದ ನಿಯಂತ್ರಣ ವ್ಯವಸ್ಥೆಗಳ ಪಾಲನೆ ಮತ್ತು ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಸಾರ್ವಜನಿಕರಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಅವರು ಸಿಎ ವೃತ್ತಿಪರರನ್ನು “ರಾಷ್ಟ್ರ ನಿರ್ಮಾಣದ ಪಾಲುದಾರರು” ಎಂದು ಶ್ಲಾಘಿಸಿದರು. ಉಖಖಿ ಹಾಗೂ ಆದಾಯ ತೆರಿಗೆ ಕಾಯ್ದೆಗಳ ಯಶಸ್ವಿ ಅನುಷ್ಠಾನದಲ್ಲಿ ಸಿಎಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.  

ಅವರು ಮುಂದುವರಿದು, ಭಾರತ ಸರ್ಕಾರವು ಜಾರಿಗೆ ತಂದಿರುವ ‘2025ರ ಹೊಸ ಆದಾಯ ತೆರಿಗೆ ಕಾಯ್ದೆ’ಯ ಪರಿಣಾಮಕಾರಿ ಅನುಷ್ಠಾನದಲ್ಲಿ ಸಿಎಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಒತ್ತಿಹೇಳಿದರು. ಜೊತೆಗೆ ದೇಶದ ಸುಸ್ಥಿರ ಆರ್ಥಿಕ ಬೆಳವಣಿಗೆಯಲ್ಲಿ ಚಾರ್ಟರ್ಡ್‌ ಅಕೌಂಟೆಂಟ್ಗಳ ಕೊಡುಗೆಯನ್ನು ಪ್ರಶಂಸಿಸಿ, ಜಾಗತಿಕ ಆರ್ಥಿಕ ಬೆಳವಣಿಗೆಗಳ ಕುರಿತು ಸರ್ಕಾರ ಹಾಗೂ ಸಾರ್ವಜನಿಕರಿಗೆ ಉಪಯುಕ್ತ ಸಲಹೆಗಳನ್ನು ನೀಡುವಂತೆ ಸಿಎ ಸಮುದಾಯವನ್ನು ಮನವಿ ಮಾಡಿದರು.  

ಇದಕ್ಕೂ ಮುನ್ನ, ಸಿಎ ಸಂಜೀವ್ ಆರ್‌. ದೇಶಪಾಂಡೆ ಅವರು ಸ್ವಾಗತ ಭಾಷಣ ನೀಡಿ, ಭಾರತದಲ್ಲಿನ ಚಾರ್ಟರ್ಡ್‌ ಅಕೌಂಟೆಂಟ್ಗಳ ವ್ಯಾಪಕ ಪಾತ್ರವನ್ನು ವಿವರಿಸಿದರು ಹಾಗೂ 1949ರಲ್ಲಿ  ಸ್ಥಾಪನೆಯ ಇತಿಹಾಸ ಮತ್ತು ಅದರ ಬೆಳವಣಿಗೆಯ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.  ಸಾಮಾಜಿಕ ಜವಾಬ್ದಾರಿಯ ಅಂಗವಾಗಿ, ಬೆಳಗಾವಿಯ ರೋಟರಿ ಪರಿವಾರದ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.  

ಕಾರ್ಯಕ್ರಮವನ್ನು ಸಿಎ ಅನಿಲ್ ರಾಮದುರ್ಗ ಅವರು ನಿರೂಪಿಸಿ ವಂದನಾರೆ​‍್ಣ ಸಲ್ಲಿಸಿದರು. ಸಮಾರಂಭದಲ್ಲಿ ವ್ಯವಸ್ಥಾಪಕ ಸಮಿತಿಯ ಸದಸ್ಯರಾದ ಸಿಎ ಪ್ರಸಾದ್ ಸೊಲ್ಲಾಪುರಮಠ, ಸಿಎ ಸಚಿನ್ ಖಡಬಡಿ, ಸಿಎ ವೀರಣ್ಣ ಮುರಗೋಡ, ಸಿಎ ಯಾಸೀನ್ ದೇವಲಾಪುರ ಹಾಗೂ ಬೆಳಗಾವಿ ಸಿಎ ಅಸೋಸಿಯೇಷನ್ ಅಧ್ಯಕ್ಷರಾದ ಸಿಎ ಅಭಿಷೇಕ್ ಪೋರವಾಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.