ಸಿನಿಮೀಯ ರೀತಿ ಗನ್ ತೋರಿಸಿ 75 ಲಕ್ಷ ನಗದು ಹಣ, ಕಾರು ದೋಚಿದ ಖದೀಮರು
ಬೆಳಗಾವಿ : ಮುಸುಕುದಾರಿಗಳು ಸಿನಿಮೀಯ ರೀತಿಯಾಗಿ ಬಂದು ಬಂದೂಕು ತೋರಿಸಿ 75 ಲಕ್ಷ ಹಣ, ಕಾರು, ಲ್ಯಾಪ್‌ಟಾಪ್ ಕದ್ದು ಕಳ್ಳರು ಪರಾತರಿಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಬಳಿ ನಡೆದಿದೆ.
ಸುಮಾರು 75 ಲಕ್ಷ ರೂಪಾಯಿ ಹಾಗೂ ಕಾರು ದೋಚಿದ ಖತರನಾಕ್ ಕಳ್ಳರು. ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಮೇಲೆ ಘಟನೆ ನಡೆದಿದೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಬಂಗಾರ ವ್ಯಾಪಾರಸ್ಥರ ಬಳಿ ಈ ಹಣ ಲೂಟಿ ಮಾಡಲಾಗಿದೆ. ನಿನ್ನೆ ತಮ್ಮ ಆಭರಣಗಳನ್ನು ಕೊಲ್ಲಾಪುರದಲ್ಲಿ ಮಾರಾಟ ಮಾಡಿ ಕೇರಳಕ್ಕೆ ತೆರಳುವಾಗ ಈ ಘಟನೆ ನಡೆದಿದೆ.
ಮುಸುಕುಧಾರಿಗಳಿಂದ ಗನ್ ತೋರಿಸಿ ಬೆದರಿಕೆ ಹಾಕಿ 75 ಲಕ್ಷ ನಗದು ಜೊತೆ ಕಾರು ಸಹ ಸುಲಿಗೆ ಮಾಡಿ ಖದೀಮರು ಪರಾರಿಯಾಗಿದ್ದಾರೆ. ವಾಹನ ಸಂಖ್ಯೆ KA23 P 2926 ಹುಂಡೈ ವೆನ್ಯೂ ಕಾರ್ ಜೊತೆ ಪರಾರಿಯಾಗಿದ್ದಾರೆ.ವಾಹನ ತಡೆದು ಬೆದರಿಕೆ ಹಾಕಿ ಹಣ ಕದ್ದೋಯ್ದ ಕಳ್ಳರು. ಹಣ, ಕಾರು, ಲ್ಯಾಪ್‌ಟಾಪ್ ಕಳೆದುಕೊಂಡ ವ್ಯಪಾರಿಗಳು
ಪ್ರಕರಣ ಕೈಗೆತ್ತಿಕೊಂಡ ಪೋಲಿಸರು, ತನಿಖೆ ಶುರು ಮಾಡಿದ್ದಾರೆ. ಈ ಕುರಿತು ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.