ಸಂಗಮೇಶ್ವರ ಮಹಾರಾಜರ ದೇವಸ್ಥಾನದಲ್ಲಿ 74ನೇ ಸಪ್ತಾಹ ಮಹೋತ್ಸವ
74th Saptaha Mahotsav at Sangameshwara Maharaja Temple
ಜಮಖಂಡಿ 25: ಸಂಗಮೇಶ್ವರ ಭಜನಾ ಮಂಡಲಿ ಹಿರೇಪಡಸಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜನಪದ ಪರಿಷತ್ ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಹಿರೇಪಡಸಲಗಿ ಗ್ರಾಮದ ಹಟ್ಟಿ ತೋಟದ ವಸ್ತಿಯ ಸಂಗಮೇಶ್ವರ ಮಹಾರಾಜರ ದೇವಸ್ಥಾನದಲ್ಲಿ 74ನೇ ಸಪ್ತಾಹ ಮಹೋತ್ಸವವನ್ನು ಆಚರಿಸಲಾಯಿತು.
ತೇರದಾಳ ಶಾಸಕ ಸಿದ್ದು ಸೌದಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮೋಹನ ಜಾಧವ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಗೀತ ಕಾರ್ಯಕ್ರಮವನ್ನು ಕುಳಲಿ ಗ್ರಾಮದ ಯಲ್ಲಪ್ಪ ಬನಜಗೊಳ, ತೋಲಮಟ್ಟಿ ಗ್ರಾಮದ ಶೇಖರ ತೊಳಮಟ್ಟಿ, ಮಂಟೂರು ಗ್ರಾಮದ ಲಕ್ಷ್ಮೀ ಕುಳಲಿ, ಹಾಗೂ ಪ್ರೀತಿ ಗಿರಗಡ್ಡಿ, ಜಮಖಂಡಿಯ ರಾಘವೇಂದ್ರ ಕಟ್ಟಿ. ಹುನ್ನೂರಿನ ಪರಮೇಶ್ವರ ತೇಲಿ ಹಿಂದುಸ್ಥಾನಿ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗಾಯಕರಿಗೆ ಸಿದ್ದು ನಿಡೋಣಿ ತಬಲಾ ಸಾಥ ನೀಡಿದರು. ಬೆಳಗಿನ 10 ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ಸಂಗೀತ ಕಾರ್ಯಕ್ರಮ ನಡೆಯಿತು.
ತೇರದಾಳದ ಉಪನೋಂದಣಾಧಿಕಾರಿ ಸುರೇಶ ಮುತ್ತಪ್ಪಗೋಳ,ಸಿದ್ದಾಪುರದ ಪಿಕೆಪಿಎಸ್ ಅಧ್ಯಕ್ಷ ಏಗಪ್ಪ ಸವದಿ, ಹಿರೇಪಡಸಗಿ ಪಿಕೆಪಿಎಸ್ ಅಧ್ಯಕ್ಷ ಸಾಬು ಗುಗ್ಗರಿ, ಶಿವರುದ್ರ ಹುಟಗಿ, ಮಲ್ಲೇಶ ಹುಟಗಿ, ಎಸ್.ಎಂ. ಕುಂಚನೂರ, ಮಹದೇವ ದೈಗೋಂಡ, ದರೆಪ್ಪ ಗುಗ್ಗರಿ, ಭೀಮನಗೌಡ ಪಾಟೀಲ, ಮಾದನಗೌಡ ಪಾಟೀಲ, ಭೀಮಸಿ ಕದಂ, ಗ್ರಾಪಂ ಅಧ್ಯಕ್ಷೆ ಶಾರದಾ ನಾಗನೂರು, ಉಪಾಧ್ಯಕ್ಷೆ ಶೋಭಾ ಗಾಣಗೇರ, ಪಿಡಿಓ ಸಂಜೀವ ಕುಮಾರ ಮಲಕಣ್ಣವರ, ಜನಪದ ಪರಿಷತ್‌ನ ಅಧ್ಯಕ್ಷ ಬಿ.ಎನ್ ಅಸ್ಕಿ, ಮಾದೇವ ಗುಗ್ಗರಿ, ವಾಸುದೇವ ಮೊರೆ, ಲಕ್ಷ್ಮಣ ಸೌದಿ, ಮಲ್ಲಪ್ಪ ದಳವಾಯಿ, ಸಾಬು ಮಾಳಿ, ಸಂಗಪ್ಪ ಬೆಳ್ಳಿಗೇರಿ, ಗುರ್ಪ ಗುಗ್ಗರಿ, ಭೀಮಪ್ಪ ಕಾತ್ರಾಳ, ಮುರುಗೆಪ್ಪ ಮಮದಾಪುರ, ಮಹದೇವ ಕಾತ್ರಾಳ ಮುಂತಾದವರು ಭಾಗವಹಿಸಿದ್ದರು.
ಅಡಿಹುಡಿ ಗ್ರಾಮದ ಮಲ್ಲಪ್ಪ ಹಿರೇಕುರುಬರ ಅನ್ನ ಸಂತರೆ್ಣ ಸೇವೆ, ಮುದ್ರಣಸೇವೆ ರಾಮನಗೌಡ ವಜ್ರಮಟ್ಟಿ, ಭಕ್ತಿ ಸೇವೆಯನ್ನು ಕಲ್ಲಪ್ಪ ನಾವಿ, ದರೆಪ್ಪ ಸಾಗರ ನೋಡಿಕೊಂಡರು. ವಿಷ್ಣು ಕಂಕಣವಾಡಿ, ಮಲ್ಲಪ್ಪ ಚೌಹಾಣ, ಶಂಭು ಚೌಹಾಣ, ಲಕ್ಷ್ಮಣ ದತ್ತುಬಾಗೊಳ, ಧರೆಪ್ಪ ಕುಂಬಾರ, ಶಂಕರ ಕುಂಬಾರ ಉಸ್ತುವಾರಿ ವಹಿಸಿದ್ದರು. ನಾಗರಾಜ ಯತ್ನಾಳ ಸ್ವಾಗತಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 