ಕೆಂಪವಾಡ ಸಕ್ಕರೆ ಕಾರ್ಖಾನೆಯಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ
70th Karnataka Rajyotsava celebrated at Kempavada Sugar Factory
ಲೋಕದರ್ಶನ ವರದಿ
ಕೆಂಪವಾಡ ಸಕ್ಕರೆ ಕಾರ್ಖಾನೆಯಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ
ಕಾಗವಾಡ, 02 : ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ್ ಕಾರ್ಖಾನೆಯ ಆವರಣದಲ್ಲಿ ಶನಿವಾರ ದಿ. 01 ರಂದು ಯುವ ನಾಯಕ ಹಾಗೂ ಅಥಣಿ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಅವರು ತಾಯಿ ಭುವನೇಶ್ವರಿ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ನಮನಗಳನ್ನು ಸಲ್ಲಿಸಿ, 70 ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ಕನ್ನಡಿಗರಾದ ನಾವು ಹೃದಯವಂತರಾಗಿದ್ದು, ನಾವೆಲ್ಲ ಸೇರಿ ಅನ್ಯ ಭಾಷಿಕರೊಂದಿಗೆ ಸೌಹಾರ್ದತೆಯಿಂದ ನಾಡಹಬ್ಬ ಆಚರಿಸುವ ಮೂಲಕ ಅವರಿಗೆ ನಮ್ಮ ಹೃದಯವೈಶಾಲೆಯತೆಯನ್ನು ತೋರಿಸಬೇಕು. ನಮ್ಮ ಕಾರ್ಖಾನೆಯಲ್ಲಿರುವ ಸಾವಿರಾರು ಬಿಹಾರಿಗಳ ಜೊತೆಗೆ ಇಂದು ನಾವು ಕನ್ನಡ ರಾಜೋತ್ಸವ ಆಚರಿಸುವ ಮೂಲಕ ಅವರಿಗೆ ಸಿಹಿಹಂಚಿ ಸಂಭ್ರಮಿಸಿದ್ದೇವೆ. ಇದರಿಂದ ಅವರಲ್ಲಿ ಕನ್ನಗರ ಬಗ್ಗೆ ಅಭಿಮಾನ ಮೂಡಿದೆ ಎಂದರು.
ಈ ಸಮಯದಲ್ಲಿ ಕಾರ್ಖಾನೆಯ ಮುಖ್ಯ ಕೃಷಿ ಅಧಿಕಾರಿ ಬಂಡು ಜಗತಾಪ, ಸೆಕ್ಯುರಿಟಿ ಅಧಿಕಾರಿ ನಾನಾಸಾಬ ಕಾಳೆಲಿ, ರಮೇಶ ಘೋಡಸೆ, ಶರದ ಜತಕರ, ವಿನಾಯಕ ಪಾಟೀಲ ಸ್ಥಳೀಯ ಮುಖಂಡರಾದ ಬಾಳು ಮಗದುಮ್ಮ ದೀಲೀಪ ಪವಾರ, ಮಹಾಂತೇಶ ಕಾಂಬಳೆ, ಮನೋಹರ ಪವಾರ, ಪರಸು ಅವಳೆ, ರಾಜು ಡೊಳ್ಳಿ ಸೇರಿದಂತೆ ಸೆಕ್ಯುರಿಟಿ ವಿಭಾಗದ ಸಿಬ್ಬಂದಿಗಳು ಹಾಗೂ ಕಾರ್ಮಿಕ ಬಂಧುಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 