ಹರ್ಬಿನ್, ಎಪ್ರಿಲ್ 20, ಚೀನಾದ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ ಸೋಮವಾರ ಸ್ಥಳೀಯವಾಗಿ ಹೊಸದಾಗಿ 7 ಹೊಸ ಕರೋನ ಸೋಂಕಿನ ಪ್ರಕರಣ ವರದಿಯಾಗಿದೆ . ಮೂರು ಸ್ಥಳೀಯ ಪ್ರಕರಣವಾಗಿದ್ದರೆ ಇತರೆ ನಾಲ್ಕು ಹೊಸ ಪ್ರಕರಣಗಳು ಆಮದು ಪ್ರಕರಣಗಳಾಗಿದೆ ಎಂದು ಪ್ರಾಂತೀಯ ಆರೋಗ್ಯ ಆಯೋಗ ಸೋಮವಾರ ವರದಿ ಮಾಡಿದೆ. ಆಮದು ಮಾಡಿದ ನಾಲ್ಕು ಹೊಸ ಪ್ರಕರಣಗಳು ರಷ್ಯಾದಿಂದ ಹಿಂದಿರುಗಿದ ಚೀನಿ ಪ್ರಜೆಗಳಾಗಿದ್ದಾರೆ .ಭಾನುವಾರದ ಹೊತ್ತಿಗೆ, ಪ್ರಾಂತ್ಯದಲ್ಲಿ ಒಟ್ಟು 381 ಆಮದು ಮಾಡಿದ ಕರೋನ ಪ್ರಕರಣಗಳ ವರದಿಯಾಗಿದೆ