ಚೀನಾ ಕರಾವಳಿಯಲ್ಲಿ ಹಡಗು ಮುಳುಗಿ 7 ಸಾವು

  ಜಿನಾನ್, ಆಗಸ್ಟ್ 17       ಚೀನಾದ ಪೂರ್ವ ಶಾಂಡೊಂಗ್ ಪ್ರಾಂತ್ಯದ ಕರಾವಳಿಯಲ್ಲಿ ಹಡಗು ಮುಳುಗಿ  ಏಳು ಜನರು ಮೃತಪಟ್ಟಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಕಡಲ ರಕ್ಷಣಾ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.   

  ಉತ್ತರ ಹೆಬೀ ಪ್ರಾಂತ್ಯದ ಹಡಗು ಇದಾಗಿದ್ದು, ಗೇಲೆಯಿಂದ ರಿಜಾವೊ ನಗರದ ಬಂದರಿನ ಬಳಿ ಮುಳುಗಿತು. ಈ ಶುಕ್ರವಾರ ಮಧ್ಯಾಹ್ನ ಈ ಅಪಘಡ ಸಂಭವಿಸಿದೆ. 

 ಶನಿವಾರ ಏಳು ಜನರ ಮೃತ ದೇಹಗಳು ಪತ್ತೆಯಾಗಿದ್ದು, ಕಾಣೆಯಾದವರಿಗಾಗಿ ರಕ್ಷಣಾ ತಂಡದವರಿಂದ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತ ಸಂಭವಿಸಿದಾಗ ಸೆಕೆಂಡಿಗೆ 50 ಮೀಟರ್ ವೇಗದಲ್ಲಿ  ಗಾಳಿ ಬೀಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.