ಸಂಚಾರಿ ಕುರಿಗಾರರ 7 ಕುರಿ ಕಳುವು: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೇಂದು ಮನವಿ
7 Sheep theft: Appeal to impose severe punishment on the accused
ಬೆಳಗಾವಿ 31 : ಕೆಲವು ತಿಂಗಳುಗಳಿಂದ ನಂದಗಡ ಮತ್ತು ಹೀರೆಬಾಗೆವಾಡಿಯಲ್ಲಿ ಸಂಚಾರಿ ಕುರಿಗಾಯಿಗಳಾದ ಸಂತೋಷ ಸಣ್ಣಯಲ್ಲಪ್ಪ ಬೀರಣ್ಣವರ, ಮಿಡಕನ ಹಟ್ಟಿ, ಗೋಕಾಕ ಮತ್ತು ನಾಗಪ್ಪ ಚಂದ್ರ್ಪ ಟೋಣ್ಣಿ ಇವರುಗಳ 7 ಕುರಿಗಳು ಕಳ್ಳತನವಾಗಿದ್ದು ಆರೋಪಿಗಳು ಸಿಕ್ಕಿದ್ದು ಮತ್ತು ಕಳೆದ 2-3 ತಿಂಗಳುಗಳಿಂದ ಸತತವಾಗಿ ಬೇರೆ ಬೇರೆ ಕುರಿಗಾರರ ಕುರಿಗಳು ಕಳ್ಳತನವಾಗಿದೆ.
ಆರೋಪಿಗಳ ಮೇಲೆ ತಕ್ಷಣ ಕಾನೂನು ಕ್ರಮ ಜರಿಗಿಸಬೇಕೆಂದು ಕುರಿಗಾರರ ವತಿಯಿಂದ ಸಭೆ ನಡೆಸಿ, ಜಿಲ್ಲಾ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಆರೋಪಿಗಳಿಗೆ ತಕ್ಷಣ ಶಿಕ್ಷೆಯನ್ನು ನೀಡಲು ಆಗ್ರಹಿಸಲಾಯಿತು.ರಾಜ್ಯಾದಂತ ಕುರಿಗಾಯಿಗಳಿಗೆ ರಕ್ಷಣೆ ಇಲ್ಲದಂತಾಗಿದೆ, ಅರಣ್ಯ ಇಲಾಖೆಯವರು ಕಳ್ಳಕಾಕರಿಂದ ಕುರಿಗಳನ್ನು ರಕ್ಷಿಸಬೇಕಾದ ಅನಿವಾರ್ಯತೆ ಇದೆ. ಹತ್ಯೆ, ಕಳ್ಳತನ, ಹಿಂಸಾತ್ಮಕ ಘಟನೆಗಳಿಗೆ ನಿಷ್ಪಕ್ಷಪಾತ ತನಿಕೆ ಮಾಡಿ ಶಿಕ್ಷೆ ನೀಡಬೇಕು. ಬೆಳಗಾವಿ ಜಿಲ್ಲೆಯ ಕುರಿಗಾಯಿಗಳಿಗೆ ಪ್ರತ್ಯೇಕ ಬಂದೂಕು ತರಬೇತಿ ನೀಡಬೇಕು. ಈ ಸಂದರ್ಭದಲ್ಲಿ ಮಾರುತಿ ಮರ್ಡಿ, ಮಲ್ಲಪ್ಪ ಭೂತಾಳಿ, ಸಂತೋಷ ಬೀರಣ್ಣನವರ, ರಾಮಸಿದ್ದ ಬೀರಣ್ಣನವರ ಜಿಲ್ಲೆಯ 100 ಕ್ಕೂ ಹೆಚ್ಚು ಸಂಚಾರಿ ಕುರಿಗಾಯಿಗಳು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 