ಬೆಂಗಳೂರು, ಮಾರ್ಚ್.5, ಕಳೆದ ಜುಲೈನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ 7 ತಿಂಗಳ ಅವಧಿ ಪೂರೈಸಿದ್ದಾರೆ. ಕಾಕತಾಳೀಯವೋ ಏನೋ ಎಂಬಂತೆ ಇಂದು ಏಳನೇ ಬಜೆಟ್ ಮಂಡಿಸಿದ್ದಾರೆ. ಹಣಕಾಸು ಇಲಾಖೆ ಜವಾಬ್ದಾರಿ ಹೊತ್ತು, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅವರು ಇಂದು ಏಳನೇ ಬಜೆಟ್ ಮಂಡನೆ ಮಾಡಿದ್ದಾರೆ. ಇನ್ನೊಂದು ವಿಶೇಷ ಎಂದರೆ ಹಳೆಯ ಮೈಸೂರು ಭಾಗದಿಂದ ಬಜೆಟ್ ಮಂಡನೆ ಮಾಡಿದ ರಾಜಕೀಯ ನಾಯಕರ ಪೈಕಿ ಯಡಿಯೂರಪ್ಪ ಅವರು 32ನೇ ಹಣಕಾಸು ಸಚಿವರಾಗಿದ್ದಾರೆ. ಎಸ್.ಎಂ ಕೃಷ್ಣ, ಮರಿಯಪ್ಪ, ಎಚ್.ಡಿ ದೇವೇಗೌಡ, ಬಿ.ಡಿ ಜತ್ತಿ,ನಿಜಲಿಂಗಪ್ಪ, ಮೊದಲಾದವರು ಸೇರಿದಂತೆ ಹಳೆಯ ಮೈಸೂರು ಭಾಗಕ್ಕೆ ಸೇರಿದ ನಾಯಕರಾಗಿದ್ದಾರೆ. ಕಳೆದ ಜುಲೈ 26 ರಂದು ಬಿಎಸ್ ಯಡಿಯೂರಪ್ಪ 4ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಮೊಟ್ಟ ಮೊದಲ ಕೃಷಿ ಬಜೆಟ್ ಮಂಡನೆ ಮಾಡಿದ ಕೀರ್ತಿ ಮತ್ತು ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.