ನವದೆಹಲಿ, ಜ.28 : ದಬಾಂಗ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ರಾಧೆ ಚಿತ್ರ ಒಂದು ಫೈಟ್ ಸೀನ್ ಗಾಗಿ ಏಳುವರೆ ಕೋಟಿರೂಪಾಯಿ ವೆಚ್ಚವಾಗಲಿದೆ.
ಪ್ರಭುದೇವ ನಿರ್ದೇಶನದ ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ ರಾಧೆ ಈಗಾಗಲೇ ಘೋಷಿಸಲಾಗಿದೆ. ಸಲ್ಮಾನ್ ಅವರ ಈ ಚಿತ್ರದ ಕ್ಲೈಮ್ಯಾಕ್ಸ್ ಗೆ ಹಣ ಖರ್ಚು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಚಿತ್ರದಲ್ಲಿ ವಿಎಫ್ಎಕ್ಸ್ ತಂತ್ರಜ್ಞಾನವನ್ನು ಬಳಲಾಗುತ್ತಿದೆ. ಇದಕ್ಕಾಗಿ ತಯಾರಕರು ಬಾಹುಬಲಿಯ ಭಾಗ 1 ಮತ್ತು ಭಾಗ 2 ರಲ್ಲಿ ಬಳಸಿದ ತಂತ್ರವನ್ನು ಬಳಸುತ್ತಾರೆ ಎಂದು ಹೇಳಲಾಗುತ್ತಿದೆ. ಈ 20 ನಿಮಿಷಗಳ ಚಿತ್ರೀಕರಣಕ್ಕಾಗಿ ಸಲ್ಮಾನ್ ಖಾನ್ ಸುಮಾರು 7.50 ಕೋಟಿ ರೂ. ಖರ್ಚು ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಆಕ್ಷನ್ ಸನ್ನಿವೇಶದಲ್ಲಿ ಸಲ್ಮಾನ್ ಖಾನ್ ಮತ್ತು ರಣದೀಪ್ ಹೂಡಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.