65 ಕಿಮೀ ಮೈಲೆಜ್ ನೀಡುವ ಇ-ಸೈಕಲ್ಸ್ ಬಿಡುಗಡೆ

ಬೆಂಗಳೂರು, ಫೆ. 19, ಪರಿಸರ ಸ್ನೇಹಿ ಇ-ಸೈಕಲ್ಸ್ ಗಳನ್ನು ನೆಕ್ಸ್ ಝೂ ಸಂಸ್ಥೆಯು ಬಿಡುಗಡೆ ಮಾಡಿದೆ. ರೋಡ್ಲಾರ್ಕ, ಎಲ್ಲೊ ಮತ್ತು ರೊಂಪುಸ್ ಎನ್ನುವ 3 ಹೊಸ ಇ-ಸೈಕಲ್ಸ್ ಗಳನ್ನು ಸಂಸ್ಥೆಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆರಾಮದಾಯಕ ಮತ್ತು ಸುರಕ್ಷಿತ ಚಾಲನೆಗಾಗಿ ಈ ಎಲ್ಲಾ ಇ-ಸೈಕಲ್ಸ್ ಗಳು 26 ಇಂಚಿನ ಟೈರ್ ಹೊಂದಿದೆ. ಇವುಗಳ ಸೀಟ್ ಗಳು ಕೂಡ ಬಹಳ ಮೃದುವಾಗಿವೆ. ಕೇವಲ 3-4 ಗಂಟೆಗಳಲ್ಲಿ ಬ್ಯಾಟರಿಗಳು ಪೂರ್ಣಪ್ರಮಾಣದಲ್ಲಿ ಚಾಜರ್್ ಮಾಡಬಹುದಾಗಿದೆ. ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದ್ದು ಇವುಗಳನ್ನು 750 ಸಲ ಚಾಜರ್್ ಮಾಡಬಹುದು.  ರೋಡ್ಲಾಕರ್್ ಇ-ಸೈಕಲ್ ನೀಲಿ ಬಣ್ಣದಲ್ಲಿ ಲಭ್ಯ. ಪೆಡಲ್ ಬಳಸಿದರೆ 65 ಕಿಮೀ ಮತ್ತು ಪೆಡಲ್ ಬಳಸದಿದ್ದರೆ 55 ಕಿಮೀ ಮೈಲೆಜ್ ಅನ್ನು ರೋಡ್ಲಾಕರ್್ ನೀಡುತ್ತದೆ. ಪ್ರತಿ ಗಂಟೆಗೆ ಇದರ ಟಾಪ್ ಸ್ಪೀಡ್ 25 ಕಿಮೀ. ಇದು ಡಿಸ್ಕ್ ಬ್ರೇಕ್ ಮತ್ತು 10 ರಿಫ್ಲೆಕ್ಟರ್ ಅನ್ನು ಒಳಗೊಂಡಿದೆ.  'ಎಲ್ಲೊ' ಇ-ಸೈಕಲ್ ಹಳದಿ, ಕೆಂಪು ಮತ್ತು ನೇರಳೆ ಬಣ್ಣದಲ್ಲಿ ಲಭ್ಯವಿದೆ. ಪುರುಷ ಮತ್ತು ಮಹಿಳೆ ಇಬ್ಬರು ಎಲ್ಲೊ-ಸೈಕಲ್ ಅನ್ನು ಬಳಸಬಹುದು. ಪೆಡಲ್ ಬಳಸಿದರೆ 45 ಕಿಮೀ ಮತ್ತು ಪೆಡಲ್ ಬಳಸದಿದ್ದರೆ 38 ಕಿಮೀ ಮೈಲೆಜ್ ನೀಡುತ್ತದೆ. ಕಳಚಬಹುದಾದ 8.8 ಎಎಚ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಇದು ಹೊಂದಿದೆ.  ರೊಂಪುಸ್ ಇ-ಸೈಕಲ್ ಕಪ್ಪು ಬಣ್ಣದಲ್ಲಿ ಲಭ್ಯ. 5.2 ಎಎಚ್ ಲಿಥಿಯಂ ಐಯಾನ್ ಬ್ಯಾಟರಿ ಒಳಗೊಂಡಿದೆ. ಪೆಡಲ್ ಬಳಸಿದರೆ 25 ಕಿಮೀ ಮತ್ತು ಪೆಡಲ್ ಬಳಸದಿದ್ದರೆ 20 ಕಿಮೀ ಮೈಲೆಜ್ ನೀಡುತ್ತದೆ.  ಇವಿ ಡ್ರೈವ್ನ ಸಾರವನ್ನು ಉತ್ತಮವಾಗಿ ಪ್ರತಿನಿಧಿಸುತ್ತವೆ. ಈ ಹೊಸ ಇ-ಸೈಕಲ್ಸ್ ಬಿಡುಗಡೆಯೊಂದಿಗೆ ಭಾರತದಲ್ಲಿ ಇ-ಸೈಕಲ್ಗಳನ್ನು ಅಳವಡಿಸಿಕೊಳ್ಳುವುದನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದ್ದು ಅದು ಪರಿಸರಕ್ಕೆ ಮಾತ್ರವಲ್ಲದೆ ನಮ್ಮ ಗ್ರಾಹಕರ ವೈಯಕ್ತಿಕ ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ. ಎಂದು ನೆಕ್ಸ್ ಝೂ ಮೊಬಿಲಿಟಿಯ ಬಿಸಿನೆಸ್ ಹೆಡ್ ಪಂಕಜ್ ತಿವಾರಿ ತಿಳಿಸಿದ್ದಾರೆ.