ಜಕಾತರ್ಾ, ಸೆ 22 ಇಂಡೋನೇಷ್ಯಾದ ಪೂರ್ವ ಮಲುಕು ಪ್ರಾಂತ್ಯದಲ್ಲಿ ಭಾನುವಾರ ಬೆಳಗಿನ ಜಾವ ಪ್ರಬಲ ಭೂಕಂಪ ಸಂಭವಿಸಿದ್ದು ಸುನಾಮಿ ಮುನ್ನೆಚ್ಚರಿಕೆ ಇಲ್ಲ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.
ಜಕಾತರ್ಾ ಕಾಲಮಾನ ಭಾನುವಾರ ಬೆಳಗಿನ ಜಾವ 2.53 ರ ಸುಮಾರಿಗೆ 6.4 ತೀವ್ರತೆಯ ಭೂಕಂಪ ಸಂಭವಿಸಿದೆ. ಮಲಕು ತೆಂಗ್ಗರಾ ಬರತ್ ಜಿಲ್ಲೆಯ 165 ಕಿ ಮೀ ವಾಯವ್ಯದಲ್ಲಿ 11 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಹೇಳಲಾಗಿದೆ.
ಇಂಡೋನೇಷ್ಯಾ ಭೂ ಭಾಗದಲ್ಲಿ ಆಗ್ಗಾಗ್ಗೆ ಭೂಕಂಪಗಳು ಸಂಭವಿಸುತ್ತಿದ್ದು ಯಾವುದೇ ಸುನಾಮಿ ಅಪಾಯದ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.