ಜುನೌ (ಅಲಾಸ್ಕಾ), ನವೆಂಬರ್ 24 : ಆಂಡ್ರಿಯನ್ ಆಫ್ ಐಲ್ಯಾಂಡ್ಸ್ನಲ್ಲಿ ಭಾನುವಾರದ ಮುಂಜಾನೆ 6.3 ತೀವ್ರತೆಯ ಭೂಕಂಪನ ಉಂಟಾಗಿದೆ ಎಂದು ಅಮೆರಿಕ ಭೂವಿಜ್ಞಾನ ಸಮೀಕ್ಷೆ ತಿಳಿಸಿದೆ.
ಅಂತಾರಾಷ್ಟ್ರೀಯ ಕಾಲಮಾನ 6.24ಕ್ಕೆ ಭೂಮಿ ಕಂಪಿಸಿದೆ. 25.1 ಕಿ.ಮೀ.ಆಳದಲ್ಲಿ ಈ ಕಂಪನ ಸಂಭವಿಸಿದೆ.
ಕಂಪನದ ಬಳಿಕ ಇನ್ನಷ್ಟು ನಡುಕ ಉಂಟಾಗುವ ಬಗ್ಗೆ ಯುಎಸ್ಜಿಎಸ್ ನಾಗರಿಕಗೆ ಎಚ್ಚರಿಕೆ ನಿಡಿದೆ. ಆದರೆ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿಲ್ಲ. ಭೂಕಂಪನದಿಂದ ಉಂಟಾದ ಸಾವು-ನೋವುಗಳ ಬಗ್ಗೆ ಇನ್ನೂ ವರದಿಯಾಗಿಲ್ಲ.