ಬೀಜಿಂಗ್, ಫೆ 15, ಕೊರೊನಾವೈರಸ್ ಸೋಂಕು ನಿಯಂತ್ರಣಾ ಕ್ರಮಗಳಿಗೆ ಹಾಗೂ ಕಂಪೆನಿಗಳು ತಮ್ಮ ಉತ್ಪಾದನೆಯನ್ನು ಪುನರಾರಂಭಗೊಳಿಸಲು ನೆರವಾಗಲು ಚೀನಾದ ಬ್ಯಾಂಕ್ ಗಳು ಶುಕ್ರವಾರದ ವೇಳೆಗೆ 537 ಶತಕೋಟಿ ಯುವಾನ್ (ಸುಮಾರು 76.89 ಶತಕೋಟಿ ಅಮೆರಿಕನ್ ಡಾಲರ್ ) ಮೊತ್ತದ ಸಾಲದ ನೆರವನ್ನು ಒದಗಿಸಿವೆ ಎಂದು ಚೀನಾ ಬ್ಯಾಂಕಿಂಗ್ ಮತ್ತು ವಿಮಾ ನಿಯಂತ್ರಣ ಆಯೋಗ(ಸಿಬಿಐಆರ್ ಸಿ)ದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಉದ್ಯಮಗಳಿಗೆ ವಿಭಿನ್ನ ಆದ್ಯತೆಯ ಹಣಕಾಸು ಸಾಲ ನೆರವು ಒದಗಿಸಲಾಗಿದೆ.
ಕೊರೋನವೈರಸ್ ಸೋಂಕಿನಿಂದ ತೀವ್ರವಾಗಿ ಭಾದಿತವಾದ ಪ್ರದೇಶಗಳಿಗೆ ನೆರವನ್ನು ಹೆಚ್ಚಿಸಲಾಗಿದೆ ಎಂದು ಸಿಬಿಐಆರ್ ಸಿ ಉಪಾಧ್ಯಕ್ಷ ಲಿಯಾಂಗ್ ಟಾವೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಾರಕ ಕರೋನವೈರಸ್ ಸೋಂಕಿನಿಂದ ಕಚ್ಚಾ ವಸ್ತು ಪೂರೈಕೆ ಕೊರತೆ ಮತ್ತು ಕಾರ್ಮಿಕರ ಕೊರತೆಯಿಂದ ಅನೇಕ ಕಾರ್ಖಾನೆಗಳು ತಮ್ಮ ಉತ್ಪಾದನೆ ಸ್ಥಗಿತಗೊಳಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.