ರಷ್ಯಾದಲ್ಲಿ 5236 ಹೊಸ ಕೊರೊನಾ ಸೋಂಕು ಪ್ರಕರಣ

ಮಾಸ್ಕೋ, ಏ 22,ರಷ್ಯಾದಲ್ಲಿ ಕಳೆದ 24 ಗಂಟೆಗಳಲ್ಲಿ 5,236 ಹೊಸ ಕೊರೊನಾ ವೈರಾಣು ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 57,999 ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಕೊರೊನಾ ಪ್ರತಿಕ್ರಿಯಾ ಕೇಂದ್ರ ಬುಧವಾರ ತಿಳಿಸಿದೆ.ಕಳೆದ 24 ಗಂಟೆಗಳಲ್ಲಿ 78 ಪ್ರಾಂತ್ಯಗಳಿಂದ 5,236 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 2,275 ಅಂದರೆ ಶೇ 43.4 ರಷ್ಟು ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿದ್ದು ಅವರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ತಿಳಿದು ಬಂದಿದೆ ಎಂದು ಪ್ರತಿಕ್ರಿಯಾ ಕೇಂದ್ರದ ಹೇಳಿಕೆ ತಿಳಿಸಿದೆ.ರಷ್ಯಾದಲ್ಲಿ ಈವರೆಗೆ 57,999 ಪ್ರಕರಣಗಳು ವರದಿಯಾಗಿದ್ದು  ಮಂಗಳವಾರ 52,763 ರಷ್ಟಿದ್ದು ಶೇ 9.9 ರಷ್ಟು ಏರಿಕೆಯಾಗಿದೆ ಎಂದು ಹೇಳಿಕೆ ತಿಳಿಸಿದೆ.ಮಾಸ್ಕೋದಲ್ಲಿ 2548 ಪ್ರಕರಣಗಳು ದಾಖಲಾಗಿದ್ದು ಈ ಪೈಕಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿಕಂಡು ಬಂದಿದೆ. ರಷ್ಯಾದಲ್ಲಿ ಕಳೆದೊಂದು ದಿನದಲ್ಲಿ 57 ಜನರು ಈ ಸೋಂಕಿನಿಂದ ಮೃತಪಟ್ಟಿದ್ದು ಒಟ್ಟು ಸಾವನ್ನಪ್ಪಿದವರ ಸಂಖ್ಯೆ 513 ಕ್ಕೆ ಏರಿಕೆಯಾಗಿದೆ. 547 ಜನರು ಗುಣಮುಖರಾಗಿದ್ದು ಒಟ್ಟು ಸೋಂಕಿನಿಂದ 4420 ಜನರು ಚೇತರಿಸಿಕೊಂಡಿದ್ದಾರೆ.