ಸಿಯೋಲ್, ಫೆ 27 : ದಕ್ಷಿಣ ಕೊರಿಯಾದಲ್ಲಿ ಕೊರೊನವೈರಸ್ (ಕೊವಿದ್-19)ನ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 1,766 ಕ್ಕೆ ಏರಿದೆ.
ಗುರುವಾರ ಸಂಜೆ 4 ಗಂಟೆ ವೇಳೆಗೆ ಒಟ್ಟು ಪ್ರಕರಣಗಳ ಸಂಖ್ಯೆ 1,766ಕ್ಕೆ ಏರಿದ್ದು, ಸಾವಿನ ಸಂಖ್ಯೆ 13ಕ್ಕೇರಿದೆ ಎಂದು ಕೊರಿಯಾ ರೋಗ ನಿಯಂತ್ರಣಾ ಸಂಸ್ಥೆ (ಕೆಸಿಡಿಸಿ) ತಿಳಿಸಿದೆ.
ಕಳೆದ ವಾರದಿಂದ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆಯಾಗಿದೆ. ಫೆಬ್ರವರಿ 19ರಿಂದ 26ವರೆಗೆ 1,230 ಹೊಸ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ನಾಲ್ಕು ಹಂತದ ವೈರಸ್ ಎಚ್ಚರಿಕೆಯನ್ನು ಭಾನುವಾರ "ಕೆಂಪು" ಮಟ್ಟಕ್ಕೆ ಸರ್ಕಾರ ಏರಿಸಿದೆ.