ನ್ಯಾಯಾಲಯ ಪ್ರಾರಂಭವಾಗಿ 50 ವರ್ಷ: ಸುವರ್ಣ ಮಹೋತ್ಸವ ಆಯೋಜನೆ
50 years since the court opened: Golden Jubilee celebration organized
ಸಿಂದಗಿ 19: ಪಟ್ಟಣದ ನ್ಯಾಯಾಲಯ ಪ್ರಾರಂಭವಾಗಿ 50 ವರ್ಷಗಳು ಗತಿಸಿದ ಹಿನ್ನಲೆಯಲ್ಲಿ ವಕೀಲರು ಸಮಾಜಮುಖಿ ಕಾರ್ಯನಿರ್ವಹಿಸುತ್ತಿದ್ದಾರೆ ನ್ಯಾಯ ಮನೆ ಬಾಗಿಲಿಗೆ ಎನ್ನುವಂತೆ ಜಿಲ್ಲಾ ಸತ್ರ ನ್ಯಾಯಾಲಯ ಪ್ರಾರಂಭಿಸಿ ಜನರಿಗೆ ನ್ಯಾಯ ಒದಗಿಸಬೇಕು ಎನ್ನುವ 15 ಬೇಡಿಕೆಗಳನ್ನು ಈಡೇರಿಕೆ ಸೇರಿದಂತೆ ಡಿಸೆೆಂಬರ 3 ರಂದು ಸುವರ್ಣ ಮಹೋತ್ಸವ ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದೇವೆ ಅದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ವಕೀಲರ ಸಂಘದ ಅದ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ ಮನವಿ ಮಾಡಿದರು.
ಪಟ್ಟಣದ ನ್ಯಾಯಾಲಯದ ವಕೀಲರ ಸಭಾ ಭವನದಲ್ಲಿ ನ್ಯಾಯಾಲಯದ ಸುವರ್ಣ ಮಹೋತ್ಸವ ನಿಮಿತ್ಯ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ. 2025 ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರು, ಪತ್ರಿಕೆ, ಸ್ವಚ್ಚತೆ, ಝರಾಕ್ಸ, ಬಾಂಡ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವೆ ಎನ್ನುವ ಚುನಾವಣೆಯ ಪ್ರಣಾಳೀಕೆಯಂತೆ ಈ ತಾಲೂಕಿನಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಪ್ರಕರಣಗಳು ವಿಚಾರಣೆಗೆ ಒಳಪಟ್ಟಿದ್ದು ವಿಳಂಬವಾಗುತ್ತಿವೆ ಅದಕ್ಕೆ ಇಡೀ ಜನ ಕಲ್ಯಾಣಕ್ಕಾಗಿ ಜಿಲ್ಲಾ ಸಂತ್ರ ನ್ಯಾಯಾಲಯ ಪ್ರಾರಂಭಿಸಿದರೆ ಕಕ್ಷಿದಾರರಿಗೆ ಕಡಿಮೆ ಖರ್ಚಿನಲ್ಲಿ ತ್ವರಿತಗತಿಯಲ್ಲಿ ನ್ಯಾಯ ಕೊಟ್ಟಂತಾಗುತ್ತದೆ ಎಂದು ಜಿಲ್ಲಾ ನ್ಯಾಯಾಧೀಶರಾದ ಎಚ್.ವೈ.ಅರುಣ ಹಾಗೂ ಕಿಣಗಿ ಅವರ ಮೂಲಕ ಉಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು ಮುಂದಿನ ಕ್ರಮಕ್ಕಾಗಿ ವರದಿ ರವಾನೆಯಾಗಿದೆ. ಈಗಾಗಲೇ 4 ನ್ಯಾಯಾಲಯಗಳಿದ್ದು ಆಲಮೇಲ, ದೇವರಹಿಪ್ಪರಗಿ, ತಾಳಿಕೊಟಿಗೆ ನ್ಯಾಯಾಲಯಗಳು ಪ್ರಾರಂಭವಾಗುವುದರಿಂದ ಇಲ್ಲಿಯೇ ಜಿಲ್ಲಾ ಸಂತ್ರ ನ್ಯಾಯಾಲಯ ಪ್ರಾರಂಭಿಸಿದರೆ ಜನತೆಗೆ ಅನುಕೂಲವಾಗುತ್ತದೆ. ಹಳೇ ನ್ಯಾಯಾಲಯದ ಕಟ್ಟಡ 1986ರಲ್ಲಿ ನಿರ್ಮಾಣವಾಗಿ 40 ವರ್ಷಗಳು ಗತಿಸಿ ಅವು ಶಿಥಿಲಗೊಂಡಿವೆ ಅವುಗಳನ್ನು ತೆರವುಗೊಳಿಸಲು ವರದಿ ಬಂದಿದ್ದು ರೂ 10 ಕೋಟಿ ವೆಚ್ಚದ ನೀಲಿ ನಕ್ಷೆ ತಯಾರಿಸಿದ್ದು ದಾನಿಗಳಿಂದ ಹಾಗೂ ಜನಪ್ರತಿನಿಧಿಗಳಿಂದ ಹಣ ಕ್ರೂಡಿಕರಿಸಿ ನ್ಯಾಯಾಲಯ ಸಂಕೀರ್ಣ ನಿರ್ಮಿಸಲಾಗುವುದು ಎಂದರು.
ವಕೀಲರು ಕೂಡಾ ಆರ್ಥಿಕವಾಗಿ ಹಿಂದಿರುವ ಹಿನ್ನಲೆಯಲ್ಲಿ ದಾನಿಗಳಿಂದ 4 ಎಕರೆ ಜಮೀನು ಖರೀಧಿಸಿ ವಕೀಲರ ಕಾಲೋನಿ ಮಾಡುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ತಹಶೀಲ್ದಾರ ನಡೆಸಿದ ಆರ್.ಟಿ ಪ್ರಕರಣಗಳು ಇತ್ಯರ್ಥವಾಗದ ಪ್ರಕರಣಗಳನ್ನು ಉಪವಿಬಾಗಾಧಿಕಾರಿಗೆ ಒಳಪಡುತ್ತವೆ ಇತ್ಯರ್ಥಕ್ಕೆ ಶಾಸಕರ ಸಹಕಾರದಲ್ಲಿ ಅವುಗಳನ್ನು ಈ ನ್ಯಾಯಾಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಸುವರ್ಣ ಮಹೋತ್ಸವ ಸಂದರ್ಭದಲ್ಲಿ ವಕೀಲರು ಕೂಡಾ ಸಮಾಜಮುಖಿ ಕಾರ್ಯನಿರ್ವಹಿಸುತ್ತಾರೆ ಎನ್ನುವ ಸಂದೇಶ ನೀಡುವ ಸಲುವಾಗಿ ಪ್ರೌಡಶಾಲಾ, ಪದವಿ ಪೂರ್ವ, ಪದವಿ ಕಾಲೇಜು ಮಟ್ಟದಲ್ಲಿ ಪ್ರಬಂಧ ಸ್ಪರ್ದೇ, ಕ್ರಿಕೇಟ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರಿ್ಡಸುವ ಸದುದ್ದೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎ.ಜಿ.ಮಸರಕಲ್, ಸ.ಕಾರ್ಯದರ್ಶಿ ಪಿ.ಎಂ.ಬಡಿಗೇರ, ಎಸ್.ಎಸ್. ಬಮ್ಮನಜೋಗಿ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 