ಅಮೆರಿಕಾದಲ್ಲಿ 50 ಸಾವಿರ ಮಂದಿ ಸಾವು; ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ

ನ್ಯೂಯಾರ್ಕ್, ಏ 25, ಅಮೆರಿಕಾದಲ್ಲಿ ಕೊರೊನಾ ವೈರಾಣು  ಸೋಂಕಿನಿಂದ  ಮೃತಪಟ್ಟವರ ಸಂಖ್ಯೆ  50 ಸಾವಿರದ ಗಡಿ ದಾಟಿದೆ. ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ಪ್ರಕಾರ,  ಅಮೆರಿಕಾದಲ್ಲಿ  ಕೋವಿಡ್ -19 ಸಾವುಗಳ ಸಂಖ್ಯೆ 50,031 ತಲುಪಿದೆ ಎಂದು  ತಿಳಿಸಿದೆ.ದೇಶದಲ್ಲಿ ಈವರೆಗೆ  ಒಟ್ಟು  8  ಲಕ್ಷದ 70ಸಾವಿರದ 468  ಸೋಂಕು ಪ್ರಕರಣಗಳು  ವರದಿಯಾಗಿವೆ. ನ್ಯೂಯಾರ್ಕ್  ರಾಜ್ಯ ಸೋಂಕಿನಿಂದ ತೀವ್ರ ಬಾಧಿತಗೊಂಡಿದ್ದು,  2 ಲಕ್ಷದ 63 ಸಾವಿರದ 460 ಸೋಂಕು  ಪ್ರಕರಣಗಳು ವರದಿಯಾಗಿದ್ದು, 20.982 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ,  ನ್ಯೂಜರ್ಸಿ ರಾಜ್ಯದಲ್ಲಿ  5,426, ಮಿಚಿಗನ್ 2,977 ಹಾಗೂ ಮೆಸಾಚೂಸೆಟ್ಸ್ 2,360ಮಂದಿ ಮೃತಪಟ್ಟಿದ್ದಾರೆ  ಎಂದು  ಅಂಕಿ ಅಂಶ ನೀಡಿದೆ. ಕೋವಿಡ್ -19  ಸೋಂಕಿನಿಂದ      ಉಂಟಾಗಿರುವ  ಸಾವುಗಳು ಮತ್ತು ದೃಢಪಟ್ಟ  ಪ್ರಕರಣಗಳ ಸಂಖ್ಯೆಯಲ್ಲಿ  ಅಮೆರಿಕಾ  ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿದೆ.      ಜಗತ್ತಿನಾದ್ಯಂತ  2.8  ದಶಲಕ್ಷ    ಕೊರೊನಾ ಸೋಂಕು  ಪ್ರಕರಣಗಳು  ವರದಿಯಾಗಿದ್ದು, 1. 96,000  ಮಂದಿ  ಮೃತಪಟ್ಟಿದ್ದಾರೆ  ಎಂದು  ಸಿಎಸ್ ಎಸ್ ಇ  ತಿಳಿಸಿದೆ.