ಇಂಡೋನೇಷ್ಯಾ ಕರಾವಳಿಯಲ್ಲಿ 5.9 ತೀವ್ರತೆಯ ಭೂಕಂಪನ

ಜಕಾತರ್ಾ,  ಸೆ 22  ಇಂಡೋನೇಷ್ಯಾ ಕರಾವಳಿಯಲ್ಲಿ 5.9 ತೀವ್ರತೆಯ ಭೂಕಂಪ  ಸಂಭವಿಸಿದೆ ಎಂದು ಅಮೆರಿಕ ಭೂ ವಿಜ್ಞಾನ ಸಮೀಕ್ಷೆ (ಯುಎಸ್ಜಿಎಸ್) ಶನಿವಾರ ವರದಿ  ಮಾಡಿದೆ. 

ಸೌಮ್ಲಾಕಿಯ ವಸಾಹತಿನ ವಾಯವ್ಯಕ್ಕೆ 186 ಕಿಲೋಮೀಟರ್ (116 ಮೈಲಿ) ದೂರದಲ್ಲಿ ನೆಲದಡಿ ಕಂಪನ ಸಂಭವಿಸಿದೆ. ಭೂಕಂಪನದ ಕೇಂದ್ರ ಬಿಂದು 48.5 ಕಿಲೋಮೀಟರ್ ಆಳ ದಾಖಲಾಗಿದೆ. 

ಭೂಕಂಪನದಿಂದ ಉಂಟಾದ ಸಾವು ನೋವು ಅಥವಾ ಹಾನಿಯ ಬಗ್ಗೆ ತಕ್ಷಣಕ್ಕೆ ತಿಳಿದುಬಂದಿಲ್ಲ. 

ಇಂಡೋನೇಷ್ಯಾವು "ಪೆಸಿಫಿಕ್ ರಿಂಗ್ ಆಫ್ ಫೈರ್" ನ ಭಾಗವಾಗಿದೆ, ಇದು ಪೆಸಿಫಿಕ್ ಮಹಾಸಾಗರದ ಜಲಾನಯನದ ಪ್ರಮುಖ ಪ್ರದೇಶವಾಗಿದೆ, ಇದು ಭೂಕಂಪನ ವಲಯವಾಗಿದ್ದು, ಇಲ್ಲಿ ಆಗಾಗ ಭೂಮಿ ಕಂಪಿಸುವುದು ಸಾಮಾನ್ಯವಾಗಿದೆ.