ರಷ್ಯಾದ ಕುರೀಲ್ ದ್ವೀಪದಲ್ಲಿ 5.6 ತೀವ್ರತೆಯ ಭೂಕಂಪ

ಯುಜ್ನೋ- ಸಖಲಿನಿಸ್ಕ್, ಫೆ 24, ರಷ್ಯಾದ ಕುರಿಲ್ ದ್ವೀಪಗಳಲ್ಲಿ ಭಾನುವಾರ ರಾತ್ರಿ 12.57ಕ್ಕೆ  5.6 ತೀವ್ರತೆ ಭೂಕಂಪ ಸಂಭವಿಸಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. ಇಟುರಪ್ ದ್ವೀಪದ ಸಮೀಪದಲ್ಲಿ ಭೂಕಂಪ ಸಂಭವಿಸಿದ್ದು, ಕುರ್ಲಿಸ್ಕ್  ನಗರದ ಪೂರ್ವದ 49 ಕಿಮೀ ದೂರದಲ್ಲಿ ಅದರ ಕೇಂದ್ರಸ್ಥಾನವಿತ್ತು ಎಂದು ತಿಳಿದುಬಂದಿದೆ. ಆದರೆ, ತಕ್ಷಣಕ್ಕೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ.