ಬೀಜಿಂಗ್, ಏ 11, ಫಿಲಿಪ್ಪೀನ್ಸ್ ನಲ್ಲಿ ಪೊಡಾಗ್ಯುಟೇನ್ ನಿಂದ 91 ಕಿಲೋಮೀಟರ್ ಆಗ್ನೇಯದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ ಶುಕ್ರವಾರ ಗ್ರೀನ್ ವಿಚ್ ಕಾಲಮಾನ 18.45.49 ರ ಸಮಯದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.1 ರಷ್ಟು ದಾಖಲಾಗಿತ್ತು ಎಂದು ವರದಿಯಾಗಿದೆ. 5.6425 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 126.5887 ಡಿಗ್ರಿ ಪೂರ್ವ ರೇಖಾಂಶದಲ್ಲಿ 76.92 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ವರದಿಯಾಗಿದೆ.