ಬೀಜಿಂಗ್, ಜ 25 ,ಟಿಬೆಟ್ ನ ಕ್ವಾಂಡೋದಲ್ಲಿ ಶನಿವಾರ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಚೀನಾದ ಭೂಕಂಪ ಜಾಲ ಕೇಂದ್ರ ತಿಳಿಸಿದೆ. ಶನಿವಾರ ಸ್ಥಳೀಯ ಕಾಲಮಾನ 6.56 ರ ಸುಮಾರಿಗೆ 5.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.ಉತ್ತರ ಅಕ್ಷಾಂಶ 31.98 ಡಿಗ್ರಿ ಮತ್ತು ಪೂರ್ವ ರೇಖಾಂಶ 95.09 ಡಿಗ್ರಿಯಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ವರದಿಯಾಗಿದೆ.