ಜನತಾ ಸಹಕಾರಿ ಬ್ಯಾಂಕ್ನ ೪೯ನೇ ವಾರ್ಷಿಕ ಮಹಾಸಭೆ
49th Annual General Meeting of Janata Sahakari Bank
ಹಾರೂಗೇರಿ ೨೪: ರಿಸರ್ವ ಬ್ಯಾಂಕಿನ ನಿಯಮಾನುಸಾರ ಅರ್ಬನ್ ಬ್ಯಾಂಕುಗಳಲ್ಲಿ ನಿರ್ದೇಶಕರಾಗಿ ೧೦ ವರ್ಷ ಮಾತ್ರ ಅವಕಾಶವಿರುವುದರಿಂದ, ೧೦ ವರ್ಷ ಪೂರೈಸಿದ ನಿರ್ದೇಶಕರು ಹಂತಹAತವಾಗಿ ರಾಜೀನಾಮೆಯನ್ನು ನೀಡುತ್ತಿದ್ದು, ಹೊಸದಾಗಿ ನಿರ್ದೇಶಕರನ್ನು ನೇಮಿಸಿ ಕೊಳ್ಳಲಾಗುತ್ತಿದೆ ಎಂದು ಜನತಾ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ಜನತಾ ಸಹಕಾರ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಡೆದ ೪೯ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೂತನ ನಿರ್ದೇಶಕರಿಗೆ ೩ ವರ್ಷಗಳ ಕೂಲಿಂಗ್ ಅವಧಿ ಇರುತ್ತದೆ ಎಂದ ಅವರು ಸಣ್ಣ ಸಾಲಗಳು ಹೆಚ್ಚು ನೀಡಿದರೆ ಬಹಳಷ್ಟು ಜನರಿಗೆ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ. ದೀನ, ದಲಿತ, ದುರ್ಬಲರು, ವ್ಯಾಪಾರಸ್ತರು, ಸಣ್ಣ ಕೈಗಾರಿಕೆಗಳು, ನೌಕರಸ್ತರಿಗೆ ಕಡಿಮೆ ಬಡ್ಡಿ ದರಗಳಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು. ಜನತಾ ಬ್ಯಾಂಕು ಸದಸ್ಯರಿಗೆ ಆಧುನಿಕ ಟೆಕ್ನಾಲಜಿಯನ್ನು ಹಂತಹAತವಾಗಿ ಡಿಜಿಟಲೀಕರಣ ಗೊಳಿಸಲಾಗುತ್ತಿದೆ. ೨೦೧೭ರಲ್ಲಿ ಬ್ಯಾಂಕು ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ದುಂದುವೆಚ್ಚಕ್ಕೆ ಆಸ್ಪದ ನೀಡದೇ ಸಂಸ್ಥೆಯನ್ನು ಸದೃಢವಾಗಿಟ್ಟು, ಉಳಿದ ನಿಧಿಗಳಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದೆಂದು ರಾಜಶೇಖರ ಪಾಟೀಲ ಅವರು ಹೇಳಿದರು. ವೃತ್ತಿಪರ ನಿರ್ದೇಶಕ ಸಿ.ಡಿ.ಮುಂಗುರವಾಡಿ ಮಾತನಾಡಿ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರ ಬ್ಯಾಂಕುಗಳ ಕೊಡುಗೆ ಅನನ್ಯವಾಗಿದ್ದು, ರಾಷ್ಟಿçÃಕೃತ ಬ್ಯಾಂಕುಗಳಿಗಿAತ ಸಹಕಾರ ಬ್ಯಾಂಕು, ಸಂಘಗಳು ಜನಸಾಮಾನ್ಯರಿಗೆ ತೀರ ಹತ್ತಿರವಾಗಿ, ಗ್ರಾಹಕ ಸ್ನೇಹಿಯಾಗಿ ಸೇವೆ ಸಲ್ಲಿಸುತ್ತಿವೆ ಎಂದರು. ಆಡಳಿತ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಸಿ.ಆರ್.ಗುಡಸಿ ಮಾತನಾಡುತ್ತ ಎನ್ಪಿಎ ಪ್ರತಿ ತ್ರೆöÊಮಾಸಿಕ ರಿಕವರಿಯನ್ನು ಆಧರಿಸಿದ್ದು, ಸಾಲಗಾರ ಸದಸ್ಯರು ತ್ರೆöÊಮಾಸಿಕವಾಗಿ ಸಾಲವನ್ನು ಸರಿಯಾಗಿ ತುಂಬಿ, ಬ್ಯಾಂಕಿನ ಏಳಿಗೆಗೆ ಶ್ರಮಿಸಬೇಕೆಂದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಅಮರಶೆಟ್ಟಿ ವಾರ್ಷಿಕ ವರದಿ ಅಡಾವೆ ಪತ್ರಿಕೆ ವಾಚನ ಮಾಡುತ್ತ ವರ್ಷದ ಕೊನೆಯಲ್ಲಿ ೪೭೯೦ ಸದಸ್ಯರಿದ್ದು, ೨೩೩.೨೫ ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ೨೦೪.೩೦ ಕೋಟಿ ರೂ. ಠೇವು ಸಂಗ್ರಹಿಸಿದ್ದು, ೧೧೮ ಕೋಟಿ ಸಾಲ ವಿತರಿಸಿ, ೨೦೨೫-೨೦೨೬ ನೇ ಸಾಲಿನ ಆರ್ಥಿಕ ವರ್ಷದಲ್ಲಿ ೧.೨೦ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ವಿವರಿಸಿದರು. ಈವೇಳೆ ಅಮೃತಾ ಮುಗುಂರವಾಡಿ, ಮಂಜುನಾಥ ಕಶೆಟ್ಟಿ, ಸಂತೋಷ ತೇಲಿ, ಆರ್.ಟಿ.ನಾಗರಾಳೆ, ಹಣಮವ್ವ ಮಾದರ ಅವರನ್ನು ನೂತನ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.
ಬ್ಯಾಂಕ್ ಉಪಾಧ್ಯಕ್ಷ ತಮ್ಮಣ್ಣಪ್ಪ ತೇಲಿ, ನಿರ್ದೇಶಕರಾದ ಪ್ರಕಾಶ ಕಶೆಟ್ಟಿ, ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂಜೀವ ಅವಕ್ಕನವರ, ಶಂಕರ ಮಾನಶೆಟ್ಟಿ, ಪ್ರಭುಲಿಂಗ ಪಾಲಭಾವಿ, ಭೀಮಗೊಂಡ ಕರ್ಣವಾಡಿ, ಹಣಮಂತ ಮಡಿವಾಳ, ರಾಮಪ್ಪ ನಾಯಿಕ, ಬಸಗೌಡ ಪಾಟೀಲ, ಜಯಶ್ರೀ ಪಾಟೀಲ, ಕಲ್ಪನಾ ಮಾದರ ಹಾಗೂ ಶಾಖಾ ವ್ಯವಸ್ಥಾಪಕರು ಮತ್ತು ರಾಯಬಾಗ, ಅಥಣಿ, ಉಗಾರಖುರ್ದ ಶಾಖೆಗಳ ಸಿಬ್ಬಂದಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಬ್ಯಾಂಕಿನ ಮಹಿಳಾ ಸಿಬ್ಬಂದಿಯವರು ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕ ಆನಂದ ಗುರವ ಸ್ವಾಗತಿಸಿದರು. ಡಿ.ಬಿ.ಅಂಬಿ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ.ಕೊಕಟನೂರ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 