ಚೀನಾ: ಒಂದೇ ದಿನ 4,823 ಹೊಸ ಕರೋನವೈರಸ್ ಪ್ರಕರಣಗಳ ವರದಿ

ವುಹಾನ್, ಫೆಬ್ರವರಿ 14, ಚೀನಾ ಹಾಗೂ ಇಡಿ ವಿಶ್ವವೇ  ತತ್ತರಗೊಳ್ಳುವಂತೆ ಮಾಡಿರುವ  ಕರೋನವೈರಸ್  ಕೇಂದ್ರವಾದ ಹುಬೈ ಪ್ರಾಂತ್ಯದಲ್ಲಿ ಗುರುವಾರ ಅದೂ ಒಂದೇ ದಿನ 4,823 ಹೊಸ ದೃಡಪಡಿಸಿದ  ಪ್ರಕರಣಗಳು ವರದಿಯಾಗಿ ಮತ್ತಷ್ಟು ಬೆಚ್ಚಿ ಬೀಳುವಂತೆ ಮಾಡಿದೆ. ಪರಿಣಾಮ ಸಾವಿನ ಸಂಖ್ಯೆ  ಬಹಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ  ಎಂದೂ  ಪ್ರಾಂತೀಯ ಆರೋಗ್ಯ ಆಯೋಗ ಶುಕ್ರವಾರ ತಿಳಿಸಿದೆ.ಹೊಸ ಪ್ರಕರಣಗಳ ಸಂಖ್ಯೆಯಲ್ಲಿ 3,095 ಪ್ರಾಯೋಗಿಕವಾಗಿ ರೋಗನಿರ್ಣಯ ಮಾಡಿದ ಪ್ರಕರಣಗಳು ಸೇರಿದ್ದು  ಇವುಗಳು  ದೃ ಡಪಡಿಸಿದ ಪಡಿಸಿದ ಪ್ರಕರಣಗಳಾಗಿವೆ. ಹೊಸ ಸಾವುಗಳಲ್ಲಿ ಪ್ರಾಯೋಗಿಕವಾಗಿ ರೋಗನಿರ್ಣಯ ಮಾಡಿದ ಎಂಟು ಮಂದಿಯೂ ಸೇರಿದ್ದಾರೆ.ಇತ್ತೀಚಿನ ವರದಿಗಳಪ್ರಕಾರ  ಪ್ರಾಂತ್ಯದಲ್ಲಿ ಒಟ್ಟು ದೃಡಪಡಿಸಿದ  ಪ್ರಕರಣಗಳ ಸಮಖ್ಯೆ 51,986 ಕ್ಕೆ ಏರಿಕೆಯಾಗಿದೆ.  ಪ್ರಾಂತೀಯ ರಾಜಧಾನಿಯಾದ ವುಹಾನ್ ಒಟ್ಟು 35,991 ಪ್ರಕರಣಗಳನ್ನು ದಾಖಲಿಸಿದ್ದು, ಇದರಲ್ಲಿ 14,031 ಪ್ರಾಯೋಗಿಕವಾಗಿ ರೋಗನಿರ್ಣಯ ಮಾಡಲಾಗಿದೆ.3,689 ಶಂಕಿತ ಪ್ರಕರಣಗಳನ್ನು ಗುರುವಾರ ತಳ್ಳಿಹಾಕಿದ ನಂತರ ಹುಬೈನಲ್ಲಿ 6,169 ಶಂಕಿತ ಪ್ರಕರಣಗಳಿವೆ ಎಂದೂ ಆಯೋಗ ಹೇಳಿದೆ.ಆಸ್ಪತ್ರೆಗೆ ದಾಖಲಾದ 36,719 ರೋಗಿಗಳಲ್ಲಿ, 7,593 ಮಂದಿ ಇನ್ನೂ ತೀವ್ರ ಸ್ಥಿತಿಯಲ್ಲಿದ್ದರೆ, ಇವರ ಪೈಕಿ ಇನ್ನೂ   1,685 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದೆ.