ಮಾಸ್ಕೋ, ಮಾರ್ಚ್ 23, ಕರೋನ ಸೋಂಕು ತಡೆಯಲು ಹಲವು ದೇಶಗಳು ಹಲವು ಬಿಗಿಕ್ರಮ ಕೈಗೊಳ್ಳುತ್ತಿವೆ ನ್ಯೂಜಿಲೆಂಡ್ ಕರೋನ ತಡೆಯಲು ಈಗ ಎರಡು ದಿನ ಜನರು ಮನೆಯಿಂದ ಹೊರಗೆ ಬಾರದಂತೆ ಸ್ವಯಂ ನಿರ್ಬಂಧ ಘೋಷಿಸಿದೆ. ಸೋಮವಾರ ಸಂಪುಟ ಸಭೆಯ ನಂತರ ಜನರ ಚಲನವಲನಗಳ ಮೇಲೆ ನಿರ್ಬಂಧಗಳನ್ನು ಜಾರಿಗೊಳಿಸುವುದಾಗಿ ಪ್ರಧಾನಿ ಜಸಿಂಡಾ ಅರ್ಡೆರ್ನ್ ಹೇಳಿದ್ದಾರೆ ನಾವು ರಾಷ್ಟ್ರವ್ಯಾಪಿ 3 ನೇ ಹಂತಕ್ಕೆ ಹೋಗುತ್ತೇವೆ. 48 ಗಂಟೆಗಳ ನಂತರ, ಅಗತ್ಯ ಸೇವೆಗಳು ಜಾರಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಬೇಕಾದ ಸಮಯ, ನಂತರ ನಾವು 4 ನೇ ಹಂತಕ್ಕೆ ಹೋಗುತ್ತೇವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನ್ಯೂಜಿಲೆಂಡ್‌ನ 3 ನೇ ಹಂತವು ಎಲ್ಲಾ ಸಾರ್ವಜನಿಕ ಸ್ಥಳಗಳು ಮತ್ತು ಅನಿವಾರ್ಯವಲ್ಲದ ವ್ಯವಹಾರಗಳನ್ನು ಮುಚ್ಚುವ ಅಗತ್ಯವಿದೆ ಎಂದರು. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಜನರು ಮನೆಯಲ್ಲಿಯೇ ಇರಲು ಹೇಳಲಾಗಿದೆ , ಶಾಲೆಗಳು ಮುಚ್ಚಲಿದ್ದು , ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತವಾಗಲಿದೆ.
ಸೂಪರ್ಮಾರ್ಕೆಟ್ಗಳು, ವೈದ್ಯರು, ಔಷಾಧಲಯಗಳು ಸೇವಾ ಕೇಂದ್ರಗಳು ಮತ್ತು ಅಗತ್ಯ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕೆಲಸ ಮಾಡಲಿದೆ . ಇದರಿಂದಾಗಿ ನಾಗರಿಕರಿಗೆ ಈ ಸೇವೆಗಳಿವಎಂದು ತಿಳಿಯಲಿದೆ ಮತ್ತು ತಕ್ಷಣದ ಅಗತ್ಯಗಳಿಗಾಗಿ ಮನೆ ಬಿಟ್ಟು ಹೋಗುವುದನ್ನು ತಪ್ಪಿಸಿ. "ಸೂಪರ್ಮಾರ್ಕೆಟ್ಗಳು ತಮ್ಮ ದಾಸ್ತಾನು ಮರುಸ್ಥಾಪಿಸಲು ಸಮಯ ಬೇಕಿದೆ ಸಾಮಾನ್ಯವಾಗಿ ಶಾಪಿಂಗ್ ಮಾಡಿದರೆ ಎಲ್ಲರಿಗೂ ಸಾಕಷ್ಟು ದಾಸ್ತಾನು ಇರಲಿದೆ ಎಂದು ಅರ್ಡೆರ್ನ್ ಹೇಳಿದರು.ನ್ಯೂಜಿಲೆಂಡ್ ನಲ್ಲಿ ಇದುವರೆಗೆ 102 ಪ್ರಕರಣಗಳನ್ನು ದೃ ಡಪಡಿಸಸಿದ ಪ್ರಕರಣ ವರದಿಯಾಗಿದೆ. ನಾವು ಸ್ವಯಂ ನಿಯಂತ್ರಣ ಮಾಡದಿದ್ದರೆ ಪ್ರತಿ ಐದು ದಿನಗಳಿಗೊಮ್ಮೆ ಈ ಸಂಖ್ಯೆ ದ್ವಿಗುಣವಾಗಲಿದೆ ಎಂದೂ ಪ್ರಧಾನಿ ಆತಂಕ ವ್ಯಕ್ತಪಡಿಸಿದ್ದಾರೆ.