ದಕ್ಷಿಣ ಕೊರಿಯಾದಲ್ಲಿ ಕೊರೊನವೈರಸ್ ನ 477 ಹೊಸ ಪ್ರಕರಣಗಳು 477 CORONA VIRUS CASES IN SOUTH KOREA
Lokadrshan Daily
1/5/25, 7:04 AM ಪ್ರಕಟಿಸಲಾಗಿದೆ
ಮಾರ್ಚ್ 3ಸಿಯೋಲ್, ದಕ್ಷಿಣ ಕೊರಿಯಾದಲ್ಲಿ ಕೊರೊನವೈರಸ್ ನ 477 ಹೊಸ ಪ್ರಕರಣಗಳು ಮಂಗಳವಾರ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,812 ಕ್ಕೆ ಏರಿದೆ.ಸ್ಥಳೀಯ ಕಾಲಮಾನ ಮಂಗಳವಾರ ಸಂಜೆ 4 ಗಂಟೆಯ ವೇಳೆಗೆ ಸೋಂಕಿತ ರೋಗಿಗಳ ಸಂಖ್ಯೆ 4,812 ಕ್ಕೆ ಏರಿದ್ದು, ಸಾವಿನ ಸಂಖ್ಯೆ 29ಕ್ಕೆ ಏರಿದೆ. ಕೊರಿಯಾ ರೋಗ ನಿಯಂತ್ರಣಾ ಸಂಸ್ಥೆ ದಿನಕ್ಕೆ ಎರಡು ಬಾರಿ ಬೆಳಿಗ್ಗೆ 10 ಗಂಟೆಗೆ ಮತ್ತು ಸಂಜೆ 5 ಗಂಟೆಗೆ ಪ್ರಕರಣಗಳ ಕುರಿತ ಮಾಹಿತಿಯನ್ನು ನವೀಕರಿಸುತ್ತದೆಇತ್ತೀಚಿನ ದಿನಗಳಲ್ಲಿ ವೈರಸ್ ಸೋಂಕು ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ. ಫೆ 19 ರಿಂದ 28ರ ವರೆಗೆ 4,304 ಹೊಸ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ತನ್ನ ನಾಲ್ಕು ಹಂತದ ವೈರಸ್ ಎಚ್ಚರಿಕೆಯನ್ನು ಸರ್ಕಾರ ಭಾನುವಾರ ಅಪಾಯದ ಕೆಂಪು ಮಟ್ಟಕ್ಕೆ ಏರಿಸಿದೆ.ರಾಜಧಾನಿ ಸಿಯೋಲ್ನ ಆಗ್ನೇಯಕ್ಕೆ 300 ಕಿ.ಮೀ ದೂರದಲ್ಲಿರುವ ಡೇಗುನಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ 3,600ಕ್ಕೆ ಏರಿದ್ದರೆ, ಡೇಗು ನೆರೆ ಪ್ರದೇಶವಾದ ಉತ್ತರ ಜಿಯೊಂಗ್ಸಾಂಗ್ ನಲ್ಲಿ ಪ್ರಕರಣಗಳ ಸಂಖ್ಯೆ 685ಕ್ಕೆ ಏರಿದೆ. 2.4 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಡೇಗು ನಗರ ಸೋಂಕು ಹರಡುವಿಕೆಗೆ ಕೇಂದ್ರಬಿಂದುವಾಗಿದೆ. ಒಟ್ಟು 119 ಪ್ರಕರಣಗಳು ಡೇಗು ದಕ್ಷಿಣಕ್ಕಿರುವ ಚೆಯೊಂಗ್ಡೊ ಕೌಂಟಿಯ ಡೇನಮ್ ಆಸ್ಪತ್ರೆಯಲ್ಲಿ ಪತ್ತೆ ಮಾಡಲಾಗಿವೆ. ಆಸ್ಪತ್ರೆಯ ಮನೋವೈದ್ಯಕೀಯ ವಾರ್ಡ್ನ ಬಹುತೇಕ ಎಲ್ಲಾ ರೋಗಿಗಳಿಗೆ ವೈರಸ್ ಸೋಂಕು ಇರುವುದು ದೃಢಪಟ್ಟಿರುವುದರಿಂದ ಸುಮಾರು 650 ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿಯ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದೆಜ 3ರಿಂದ ದೇಶದಲ್ಲಿ 1,25,000 ಜನರಿಗೆ ಸೋಂಕಿನ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 85,484 ಜನರಿಗೆ ಸೋಂಕು ಇಲ್ಲದಿರುವುದು ದೃಢಪಟ್ಟಿದೆ