ಲೋಕ ಅದಾಲತ್ನಲ್ಲಿ 47,179 ಪ್ರಕರಣಗಳು ಇತ್ಯರ್ಥ
47,179 cases disposed of in Lok Adalat
ಕಾರವಾರ 14: ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದ 26 ಪೀಠಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ 40,187 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ಬಾಕಿ ಇದ್ದ 6,992 ಪ್ರಕರಣಗಳು ಸೇರಿ ಒಟ್ಟೂ 47,179 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಲ ಮರು ಪಾವತಿ, ಪರಿಹಾರ, ದಂಡ ಸೇರಿದಂತೆ ಒಟ್ಟೂ 82,62,41,255 ರೂ. ಸಂಗ್ರಹ ಮಾಡಲಾಯಿತು. 171 ಬ್ಯಾಂಕ್ ಪ್ರಕರಣ, 23,049 ವಿದ್ಯುತ್, ನೀರು ಹಾಗು ಆಸ್ತಿ ಕರದ ಪ್ರಕರಣ, 493 ಕಾರ್ಮಿಕ ಪ್ರಕರಣ, 16,456 ಕ್ರಿಮಿನಲ್ ಪ್ರಕರಣ ಇತ್ಯರ್ಥ ಮಾಡಲಾಯಿತು. ನ್ಯಾಯಾಲಯದ ಮೆಟ್ಟಿಲೇರಿದ ಹಳಿಯಾಳದ ಮೂರು ಹಾಗೂ ಕಾರವಾರದ ಒಂದು ಪ್ರಕರಣದಲ್ಲಿ ವಿಚ್ಚೇದನ ಬಯಸಿದ್ದ ದಂಪತಿಗಳು ,ಮತ್ತೆ ಜೊತೆ ಜೀವನಕ್ಕೆ ಒಪ್ಪಿ, ರಾಜಿ ಮಾಡಿಕೊಂಡಿದ್ದಾರೆ. ಸಹಬಾಳ್ವೆಗೆ ಸಹಮತ ಮಾಡಿಕೊಂಡರು ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ....
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 